2020-21ನೇ ಸಾಲಿನ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.5 ರಷ್ಟು ರಿಯಾಯಿತಿಯಲ್ಲಿ ಪಾವತಿ ಮಾಡುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಹೀಗಂತ ಹಾಸನ ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ತಿಳಿಸಿದ್ದಾರೆ.
2020ರ ಏಪ್ರಿಲ್ 30 ರವರೆಗೆ ಇದ್ದ ಅವಧಿಯನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ ಹಾಸನ ನಗರಸಭೆಯ ವ್ಯಾಪ್ತಿಯ ಆಸ್ತಿ ಮಾಲೀಕರು ಅಥವಾ ಅದಿಬೋಗದಾರರು ತಮ್ಮ ಆಸ್ತಿ ತೆರಿಗೆಯನ್ನು ಶೇ. 5 ರಿಯಾಯಿತಿಯೊಂದಿಗೆ ಮೇ 31 ರೊಳಗೆ ಪಾವತಿಸಬಹುದಾಗಿದೆ. ಜೂನ್ 30 ರವರೆಗೆ ದಂಡರಹಿತವಾಗಿ ಆಸ್ತಿ ತೆರಿಗೆ ಪಾವತಿಸಬಹುದು.
ಜೂನ್ ನಂತರ ಆಸ್ತಿ ತೆರಿಗೆಯ ಪಾವತಿಯಲ್ಲಿ ಮಾಸಿಕ ಶೇ.2 ರಷ್ಟು ದಂಡದೊಂದಿಗೆ ಆಸ್ತಿ ತೆರಿಗೆ ಪಾವತಿಸಬೇಕಾಗಿರುತ್ತದೆ. ಈ ಸಂಬಂಧ ಆಸ್ತಿ ತೆರಿಗೆಯನ್ನು ಶೇ.5 ರಷ್ಟು ರಿಯಾಯಿತಿಯೊಂದಿಗೆ ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕಾಗಿ ಅವರು ಕೋರಿದ್ದಾರೆ.