Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಜೊತೆ ‘ನಿರ್ಗಮನ ಭೇಟಿ’ ಸಹಭಾಗಿತ್ವ ಮುಂದುವರಿಕೆ

ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಜೊತೆ ‘ನಿರ್ಗಮನ ಭೇಟಿ’ ಸಹಭಾಗಿತ್ವ ಮುಂದುವರಿಕೆ
bangalore , ಗುರುವಾರ, 7 ಅಕ್ಟೋಬರ್ 2021 (20:33 IST)
ಬೆಂಗಳೂರು: ನಗರದಲ್ಲಿ ಬ್ರಿಟನ್ ಉಪ ಹೈ-ಕಮಿಷನರ್ ಆಗಿರುವ ಜೆರೆಮಿ ಪಿಲ್ಮೋರ್-ಬೆಡ್‌ಫೋರ್ಡ್ ಅವರು ಐಟಿ/ಬಿಟಿ ಸಚಿವರೂ ಆಗಿರುವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ವಿಕಾಸಸೌಧದಲ್ಲಿ ಗುರುವಾರ ಭೇಟಿಯಾಗಿ ಸೈಬರ್ ಭದ್ರತೆ, ದೂರಸಂಪರ್ಕ ಸೇರಿದಂತೆ ಗುರುತಿಸಲಾಗಿರುವ ಆಯ್ದ ಕ್ಷೇತ್ರಗಳಲ್ಲಿ ಸಹಭಾಗಿತ್ವ ಮುಂದುವರಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
 
ಜೆರೆಮಿ ಫಿಲ್ಮೋರ್ ಅವರು ತಾವು ಬ್ರಿಟನ್‌ಗೆ ವಾಪಸ್ ತೆರಳುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಾಡಿದರು. ಸಂಶೋಧನೆ ಮತ್ತು ಅಭಿವೃದ್ಧಿ, ವಿದ್ಯುತ್ ಚಾಲಿತ ವಾಹನಗಳ ಕಾರ್ಯನೀತಿ, ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಕೆಲವಾರು ವಿಷಯಗಳ ಕುರಿತೂ ಮಾತುಕತೆ ನಡೆಯಿತು.
 
ಎರಡು ದೇಶಗಳ ನಡುವೆ ಪರಸ್ಪರ ಸಹಭಾಗಿತ್ವಕ್ಕಾಗಿ 2019ರ ಅಕ್ಟೋಬರ್‌ನಲ್ಲಿ ನಾಲ್ಕು ವಲಯಗಳನ್ನು- ಫೀನ್‌ಟೆಕ್, ಕೃತಕ ಬುದ್ಧಿಮತೆ, ತ್ಯಾಜ್ಯ ವಿಲೇವಾರಿ ಮತ್ತು ಸಂಚಾರ zಟ್ಟಣೆ ನಿವಾರಣೆ- ಗುರುತಿಸುವಲ್ಲಿ ಇವರಿಬ್ಬರು ಮುಖ್ಯ ಪಾತ್ರ ನಿರ್ವಹಿಸಿದ್ದರು. ಜೊತೆಗೆ, ನವೋದ್ಯಮಗಳನ್ನು ಉತ್ತೇಜಿಸಲು ‘ಗೋ ಗ್ಲೋಬಲ್’ ಕಾರ್ಯಕ್ರಮಕ್ಕೆ ಚಾಲನೆ ನೀಡುವಲ್ಲಿ ಹಾಗೂ ರೆಗ್ಯುಲೇಟರಿ ಸ್ಯಾಂಡ್ ಬಾಕ್ಸ್ಗಳ ಸ್ಥಾಪನೆಗೆ ಮುಂದಾಗುವಲ್ಲಿ ಈ ಇಬ್ಬರು ನಾಯಕರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
 
ನವದೆಹಲಿಯಲ್ಲಿ ಬ್ರಿಟಿಷ್ ಹೈಕಮಿಷನ್‌ನ ಮಿನಿಸ್ಟರ್ ಕೌನ್ಸಿಲರ್ ಆಗಿರುವ ಕೇಟಿ ಬಡ್ಜ್ ಅವರೂ ಈ ಭೇಟಿ ವೇಳೆ ಜೊತೆಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ನಡೆದ ಬೈಎಲೆಕ್ಷನ್​ನಲ್ಲಿ ಮಮತಾ ಬ್ಯಾನರ್ಜಿ ಭರ್ಜರಿ ಜಯ