Publish Date: Mon, 20 May 2019 (13:22 IST)
Updated Date: Mon, 20 May 2019 (13:25 IST)
ಬೆಂಗಳೂರು : ಎಕ್ಸಿಟ್ ಪೋಲ್ ಈಸ್ ನಾಟ್ ಎ ಎಕ್ಸಾಕ್ಟ್ ಪೋಲ್' ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
ಎಕ್ಸಿಟ್ ಪೋಲ್ ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗಿಸುವ ಕೆಲಸವಾಗಿದೆ. ಮೋದಿ ಅಲೆ ಮಾಧ್ಯಮಗಳಲ್ಲಿ ಮಾತ್ರ ಇದೆ. ಈ ಬಾರಿ ಯುಪಿಎ, ಮಹಾಘಟಬಂಧನ್ ಅಧಿಕಾರಕ್ಕೆ ಬರೋದು ಖಚಿತ. ಈಗಿನ ಸಮೀಕ್ಷೆಗಳು ಮೇ. 23 ರಂದು ಸುಳ್ಳಾಗಲಿವೆ. 2004 ರಲ್ಲಿ ಸೋನಿಯಾ ಗಾಂಧಿ ಸೋಲುತ್ತಾರೆಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಅವರು ಗೆದ್ದಿದ್ದರು. ಈ ಬಾರಿ ಕೂಡ ಸಮೀಕ್ಷೆಗಳು ಸುಳ್ಳಾಗುತ್ತಾವೆ ಎಂದು ಹೇಳಿದ್ದಾರೆ.
ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಮಾಯಾವತಿ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಅವರನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.