ಇನ್ಮುಂದೆ ಅತ್ಯಾಚಾರಿಗಳು ತಮ್ಮ ಕಾಮುಕತನವನ್ನು ಬಿಡಲೇಬೇಕು. ಇಲ್ಲದಿದ್ದರೆ ಮರಣದಂಡನೆಗೆ ಗುರಿಯಾಗೋದು ಖಚಿತ.
ಆಂಧ್ರಪ್ರದೇಶದಲ್ಲಿ ಇನ್ಮುಂದೆ ಮಹಿಳೆಯರ ಮೇಲಿನ ದೌರ್ಜನ್ಯ ಕೇಸ್ ಗಳನ್ನು ತ್ವರಿತವಾಗಿ ಅಂದರೆ 21 ದಿನಗಳಲ್ಲಿಯೇ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು. ಅಲ್ಲದೇ ಆರೋಪಿಯ ಕೃತ್ಯ ಸಾಬೀತಾದರೆ ಮರಣದಂಡನೆ ವಿಧಿಸೋ ಕರಡು ಮಸೂದೆಯನ್ನು ಅಲ್ಲಿನ ಸಚಿವ ಸಂಪುಟ ಅಂಗೀಕರಿಸಿದೆ.
ಸಿಎಂ ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಮಹತ್ವದ ನಿರ್ಣಯ ಕೈಗೊಂಡಿದೆ.
ಅತ್ಯಾಚಾರಿಗೆ ಶಿಕ್ಷೆ ವಿಧಿಸಲು ಹಾಗೂ ಕಠಿಣ ಕ್ರಮಕ್ಕೆ ಆಂಧ್ರ ಸರಕಾರ ಮುಂದಾಗಿದೆ. ಇದಕ್ಕೆ ‘ಎಪಿ ದಿಶಾ ಆ್ಯಕ್ಟ್’ ಅನ್ನೋ ಕಾಯ್ದೆಯನ್ನು ಜಾರಿಗೆ ತಂದಿದೆ.