Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೊಸ ಮೋಟಾರು ವಾಹನ ಕಾಯ್ದೆ ಕುರಿತಾದ ಈ ಸುದ್ದಿ ಸುಳ್ಳು: ನಿತಿನ್ ಗಡ್ಕರಿ

ಹೊಸ ಮೋಟಾರು ವಾಹನ ಕಾಯ್ದೆ ಕುರಿತಾದ ಈ ಸುದ್ದಿ ಸುಳ್ಳು: ನಿತಿನ್ ಗಡ್ಕರಿ
ನವದೆಹಲಿ , ಗುರುವಾರ, 26 ಸೆಪ್ಟಂಬರ್ 2019 (17:01 IST)
ನವದೆಹಲಿ : ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಮೋಟಾರು ವಾಹನ ಕಾಯ್ದೆ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.




ಹೊಸ ಮೋಟಾರು ವಾಹನ ಕಾಯ್ದೆಯನ್ನು ಕೆಲವರು ತಮಾಷೆ ಮಾಡುತ್ತಿದ್ದು, ಲುಂಗಿ ಧರಿಸಿ, ಅರ್ಧ ತೋಳಿನ ಶರ್ಟ್ ಧರಿಸಿ, ಬನಿಯಾನ್ ಧರಿಸಿ ವಾಹನ ಚಲಾಯಿಸಿದ್ರೆ ದಂಡ ವಿಧಿಸುತ್ತಾರೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಗಡ್ಕರಿ ಕಚೇರಿಯವರು ಟ್ವೀಟ್ ಮಾಡಿ, ಲುಂಗಿ ಧರಿಸಿ, ಅರ್ಧ ತೋಳಿನ ಶರ್ಟ್ ಧರಿಸಿ, ಬನಿಯಾನ್ ಧರಿಸಿ , ಚಪ್ಪಲಿ ಧರಿಸಿ ವಾಹನ ಚಲಾಯಿಸಿದ್ರೆ , ವಾಹನದ ಗಾಜುಗಳು ಕೊಳಕಾಗಿದ್ದರೆ ದಂಡ ವಿಧಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

15 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ; ರಾಜ್ಯ ಕಾಂಗ್ರೆಸ್ ನಿಂದ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟ