Publish Date: Sun, 04 Nov 2018 (18:07 IST)
Updated Date: Sun, 04 Nov 2018 (18:11 IST)
ಕಾರ್ ಅಪಘಾತ ಆಗಿರುವ ಹಿನ್ನೆಲೆಯಲ್ಲಿ ನಟ ದರ್ಶನ್ ರೆಸ್ಟ್ ಮೂಡ್ ನಲ್ಲಿದ್ದಾರೆ. ನಾಗರಹೊಳೆ ಅಭಯಾರಣ್ಯದಲ್ಲಿ
ಭರ್ಜರಿ ಸಫಾರಿ ನಡೆಸಿದ್ದಾರೆ.
ಅಪಘಾತದಿಂದ ಬಲಗೈಗೆ ಪೆಟ್ಟಾಗಿ ವಿಶ್ರಾಂತಿ ಪಡೆಯುತ್ತಿರುವ ನಟ ದರ್ಶನ್, ನಾಗರಹೊಳೆ ಅಭಯಾರಣ್ಯದಲ್ಲಿ
ಭರ್ಜರಿ ಸಫಾರಿ ನಡೆಸಿದ್ದಾರೆ.
ಸ್ವತಃ ಕ್ಯಾಮೆರಾ ಹಿಡಿದು ಪ್ರಾಣಿ, ಪಕ್ಷಿಗಳ ಫೋಟೋಗಳನ್ನು ದಾಸ ಕ್ಲಿಕ್ಕಿಸಿದರು. ದತ್ತನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.
ಸರಿ ಸುಮಾರು 3.30 ರಿಂದ ಸಂಜೆ 6 ಗಂಟೆರವರೆಗೆ ಮಸ್ತ್ ಸಫಾರಿ ಮಾಡಿದರು. ಕೈಗೆ ಪೆಟ್ಟಾಗಿದ್ದು ಬ್ಯಾಂಡೇಜ್ ಸುತ್ತಿಕೊಂಡು ಕ್ಯಾಮೆರಾ ಶೂಟ್ ನಡೆಸಿದರು.
ಕೈಗೆ ಪೆಟ್ಟಾಗಿದ್ದರೂ ಲೆಕ್ಕಿಸದೆ ಪ್ರಾಣಿಗಳನ್ನು ನೋಡಲು ಅರಣ್ಯ ಇಲಾಖೆ ರಾಯಭಾರಿ ದರ್ಶನ್ ತೆರಳಿದ್ದರು. ಮೊದಲಿನಿಂದಲೂ ಪ್ರಾಣಿ ಪ್ರಿಯ ನಟ ಎಂದೇ ಹೀರೊ ದರ್ಶನ್ ಫೇಮಸ್ ಆಗಿದ್ದಾರೆ.
Jagadeesh
Publish Date: Sun, 04 Nov 2018 (18:07 IST)
Updated Date: Sun, 04 Nov 2018 (18:11 IST)