Webdunia - Bharat's app for daily news and videos

Install App

ಶಾಸಕ ಮುನಿರತ್ನಗೆ ಜಾಮೀನು ಸಿಕ್ಕರೂ ಮತ್ತೇ ಲಾಕ್‌ ಆಗುವ ಸಾಧ್ಯತೆ

Sampriya
ಗುರುವಾರ, 19 ಸೆಪ್ಟಂಬರ್ 2024 (17:56 IST)
ಬೆಂಗಳೂರು: ಕೊಲೆ ಬೆದರಿಕೆ ಹಾಗೂ ಜಾತಿನಿಂದನೆ ಪ್ರಕರಣದಲ್ಲಿ ಜೈಲು ಸೇರಿರುವ ಶಾಸಕ ಮುನಿರತ್ನಗೆ ಜಾಮೀನು ಮಂಜೂರಾಗಿದೆ.

ಆದರೆ ಆತ್ಯಾಚಾರ ಪ್ರಕರಣದಡಿಯಲ್ಲಿ ಮುನಿರತ್ನ ಅವರನ್ನು ಮತ್ತೇ ಪೊಲೀಸರು ಲಾಕ್ ಮಾಡುವ ಸಾಧ್ಯತೆ ಹೆಚ್ಚಿದೆ.  ಜಾಮೀನು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿ ಬಗ್ಗೆ ವಾದ, ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

ಬುಧವಾರ ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ, ಇದು ಆರೇಳು ವರ್ಷದ ಹಳೆಯ ಪ್ರಕರಣ. ಚಲುವರಾಜು ಉಪಸ್ಥಿತಿಯಲ್ಲಿ ಆದ ಘಟನೆ. ಸಾರ್ವಜನಿಕರ ಮುಂದೆ ನಡೆದ ನಿಂದನೆ ಅಲ್ಲ ಎಂದು ವಾದಿಸಿದ್ದರು.  ಸೆಕ್ಷನ್ ಪ್ರಕಾರ ಜಾತಿ ನಿಂದನೆ ಮಾಡುವಾಗ ಇಬ್ಬರಿಗಿಂತ ಹೆಚ್ಚು ಜನ ಇರಬೇಕು. ಗುಂಪಿನಲ್ಲಿ ಜಾತಿನಿಂದನೆ ಮಾಡಿರಬೇಕು. ಇಲ್ಲಿ ಚಲುವರಾಜುನೇ ನಿಜವಾದ ಆರೋಪಿ ಎಂದು ವಾದ ಮಂಡಿಸಿದ್ದರು.

ಇದು ಮುನಿರತ್ನ ವಿರುದ್ಧ ನಡೆದ ರಾಜಕೀಯ ಕುತಂತ್ರ. ಈಗಾಗಲೇ ಆರೋಪಿಯ ವಾಯ್ಸ್ ಸ್ಯಾಂಪಲ್ ಸಂಗ್ರಹ ಮಾಡಿ ಆಗಿದೆ. ಸಾಕ್ಷಿದಾರರ ಹೇಳಿಕೆಯೂ ದಾಖಲಾಗಿದೆ. ಈಗ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಜಾಮೀನು ನೀಡಬಹುದು ಎಂದು ವಕೀಲರು ಕೋರಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral video: ಟ್ರಕ್ ನಡಿ ಸಿಲುಕಿದರೂ ಈ ಮಹಿಳೆಯನ್ನು ದೇವರೇ ಕಾಪಾಡಿದ

Jyothi Malhotra: ಹೆಸರಿಗೆ ಯೂ ಟ್ಯೂಬರ್: ಪಾಕಿಸ್ತಾನಕ್ಕೆ ಗೂಢಚರ್ಯ ಮಾಡುತ್ತಿದ್ದ ಜ್ಯೋತಿ ಮಲ್ಹೋತ್ರಾ ಅರೆಸ್ಟ್

ಸಾಕ್ಷಿ ಕೇಳುವವರನ್ನು ಪಾಕ್‌ಗೆ ಕಳುಹಿಸಿ: ಕಾಂಗ್ರೆಸ್ ನಾಯಕರ ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶ

ನಾಳೆ 92ನೇ ಹುಟ್ಟುಹಬ್ಬವನ್ನು ಆಚರಿಸಲಿರುವ ದೇವೇಗೌಡರಿಗೆ ಸರ್ಪ್ರೈಸ್ ನೀಡಿದ ಏರ್‌ ಇಂಡಿಯಾ ಸಿಬ್ಬಂದಿ

ಇದು ಮೂರ್ಖತನದ ಪರಮಾವಧಿ: ರಾಜ್ಯ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಗರಂ

ಮುಂದಿನ ಸುದ್ದಿ
Show comments