ಜೈಲಿನಿಂದ ಬಾಹರ್ ಮರದ ಮೇಲೆ ಅಂದರ್

Webdunia
ಬುಧವಾರ, 13 ಜುಲೈ 2022 (17:03 IST)
ಅಪರಾಧಿಯೋರ್ವ ಜೈಲಿನಿಂದ ತಪ್ಪಿಸಿಕೊಳ್ಳಲು ಹೋಗಿ ಮರದ ಮೇಲೆ ಸಿಲುಕಿಕೊಂಡಿದ್ದಾನೆ.
 
ತಿರುವನಂತಪುರಂ: ಪೂಜಾಪ್ಪುರ ಕೇಂದ್ರ ಕಾರಾಗೃಹದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿಯೊಬ್ಬರು ಅಲ್ಲಿಂದ ಪರಾರಿಯಾಗಲು ಹೋಗಿ ಮರದ ಮೇಲೆ ಸಿಲುಕಿಕೊಂಡಿದ್ದಾರೆ.
ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಮರದ ಕೆಳಗೆ ಬಲೆ ಹಾಕಿ ಆತನನ್ನು ಕೆಳಗೆ ಕರೆತರಲಾಗಿದೆ.
 
ಇಂದು ಮಧ್ಯಾಹ್ನ ಪೂಜಾಪುರ ಕೇಂದ್ರ ಕಾರಾಗೃಹದ ಮುಂದೆ ನಾಟಕೀಯ ದೃಶ್ಯಗಳು ಕಂಡು ಬಂದಿವೆ. ಅಪರಾಧಿಯನ್ನು ಸಮಾಧಾನಪಡಿಸಲು ಮೂವರು ಪೊಲೀಸ್ ಸಿಬ್ಬಂದಿ ಮರದ ಮೇಲೆ ಹತ್ತಿದಾಗ, ಅವನು ಮರದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಆರೋಪಿಯನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಆತ ಕೆಳಗಿಳಿಯಲು ಒಪ್ಪಲಿಲ್ಲ. ಆದರೆ, ಇದ್ದಕ್ಕಿದ್ದಂತೆ ಆತ ಕುಳಿತಿದ್ದ ಕೊಂಬೆ ಮುರಿದು, ಪೊಲೀಸರು ಹಾಕಿದ್ದ ಬಲೆಗೆ ಬಿದ್ದಿದ್ದಾನೆ.
 
ಜೈಲಿನಿಂದ ತಪ್ಪಿಸಿಕೊಳ್ಳಲು ಹೋಗಿ ಮರದ ಮೇಲೆ ಸಿಲುಕಿದ ಅಪರಾಧಿ
ಬಿದ್ದ ವೇಳೆ ಬಲೆ ಇದ್ದ ಕಾರಣ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾನೆ. ನಂತರ ಆಂಬ್ಯುಲೆನ್ಸ್​​ನಲ್ಲಿ ಜೈಲಿಗೆ ಕರೆದೊಯ್ಯಲಾಗಿದೆ. ಕೊಟ್ಟಾಯಂ ಮೂಲದ ಸುಭಾಷ್ ಕೊಲೆ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಎರಡು ವಾರಗಳ ಹಿಂದೆ ನೆಟ್ಟುಕಲ್ತೇರಿ ತೆರೆದ ಕಾರಾಗೃಹದಿಂದ ಇಲ್ಲಿಗೆ ಸ್ಥಾಳಾಂತರಿಸಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸ್ ಕಚೇರಿಯಲ್ಲಿ ಶವವಾಗಿ ಪತ್ತೆಯಾದ ತ್ರಿಪುರಾ ಡಿಜಿಪಿ ಅನುರಾಗ್ ಧಂಕರ್‌, ಸಾವಿನ ಸುತ್ತಾ ಹಲವು ಅನುಮಾನ

ದೆಹಲಿಯಲ್ಲಿ ಹೈಡ್ರಾಮಾ: ಮೆಟ್ರೋ ನಿಲ್ದಾಣ ನುಗ್ಗಿದ ಸಿಜೆಪಿ ಪ್ರತಿಭಟನಾಕಾರರು; ಭಾರಿ ಲಾಠಿ ಪ್ರಹಾರ, ಇಂಟರ್ನೆಟ್ ಸ್ಥಗಿತ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕಳ್ಳತನದ ಬೆನ್ನಲ್ಲೇ ರೈಲಿನಿಂದ ಕೆಳಗೆ ಬಿದ್ದ ಮೊಬೈಲ್ ಕಳ್ಳ: Shocking video

ತಿಂಡಿ ಖರೀದಿಸುತ್ತಿದ್ದವಳು ಕ್ಷಣಾರ್ಧದಲ್ಲಿ ಸಾವು: ಸಣ್ಣ ತಪ್ಪಿನಿಂದ ರೈಲಿನಡಿಗೆ ಸಿಲುಕಿ ಪೀಸ್ ಪೀಸ್ Video

ಮುಂದಿನ ಸುದ್ದಿ
Show comments