ರಾಜ್ಯದಲ್ಲಿ ಹಿಂದೂ-ಮುಸ್ಲಿಂರ ನಡುವೆ ಒಂದಲ್ಲಾ ಒಂದು ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇದೆಲ್ಲದರ ನಡುವೆ ಈಗ ಐತಿಹಾಸಿಕ ಬೆಂಗಳೂರು ಕರಗಕ್ಕೆ ಕಂಟಕ ಎದುರಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಏಪ್ರಿಲ್ 16ಕ್ಕೆ ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಮೆರವಣಿಗೆಗೆ ಸಿದ್ಧತೆಗಳು ಶುರುವಾಗಿವೆ. ಆದ್ರೆ ರಾಜ್ಯದಲ್ಲಿ ಹಿಜಾಬ್, ಹಲಾಲ್ ನಂತರ ಸಂಘರ್ಷಗಳು ನಡೆಯುತ್ತಿವೆ. ಹೀಗಾಗಿ ಕರಗ ಉತ್ಸವದ ಮೇಲೂ ಕರಿನೆರಳಿನ ಭೀತಿ ಎದುರಾಗಿದೆ. ಏಕೆಂದರೆ ಕರಗ ಉತ್ಸವ ತಾಯಿಯ ಮೆರವಣಿಗೆ ವೇಳೆ ಪ್ರತಿ ವರ್ಷವೂ ತಾಯಿಯನ್ನು ದರ್ಗಾಗೆ ಕರೆದುಕೊಂಡು ಹೋಗಲಾಗುತ್ತೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳಿಂದಾಗಿ ಈ ಆಚರಣೆಗೆ ಸಮಸ್ಯೆ ಎದುರಾಗಲಿದೆಯಾ ಎಂಬ ಭೀತಿ ಇದೆ.