ವಿಧಾನಸಭೆ ಚುನಾವಣೆಯಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದೆ. ಸರಕಾರ ಆಡಳಿತ ಶುರುವಾಗಿ ತಿಂಗಳುಗಳೇ ಕಳೆದರೂ ಬಾಡಿಗೆ ಹಣಕ್ಕಾಗಿ ಪರದಾಟ ಮಾತ್ರ ನಿಂತಿಲ್ಲ.
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ವಾಹನಗಳ ಬಾಡಿಗೆ ಐದಾರು ತಿಂಗಳಾದರೂ ಬಂದಿಲ್ಲ. ಐದು ತಿಂಗಳಾದ್ರು ಹಣ ನೀಡದ ಜಿಲ್ಲಾಡಳಿತದ ಕ್ರಮದಿಂದ ವಾಹನಗಳ ಮಾಲೀಕರು ಪರಿತಪಿಸುತ್ತಿದ್ದಾರೆ.
ಹಣಕ್ಕಾಗಿ ಖಾಸಗಿ ವಾಹನ ಮಾಲಿಕರು ಅಂಗಲಾಚಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಕರ್ತವ್ಯಕ್ಕೆ ನೀಡಿದ ವಾಹನಗಳ ಬಾಡಿಗೆ ಬಂದಿಲ್ಲ. ತಾಲೂಕ ಕಚೇರಿಗೆ ಅಲೆದು ಅಲೆದು ಸುಸ್ತಾದ ವಾಹನ ಮಾಲಿಕರು ಇದೀಗ ತಮಗೆ ಬಾಡಿಗೆ ಬೇಕು ಅಂತಿದ್ದಾರೆ.
ಸುಮಾರು ಹತ್ತು ಲಕ್ಷ ಹಣ ಬಾಡಿಗೆ ನೀಡಬೇಕಿದ್ದ ಜಿಲ್ಲಾಡಳಿತ ಇನ್ಯಾವ ಕ್ರಮ ಕೈಗೊಳ್ಳುತ್ತದೆ. ಯಾವಾಗ ವಾಹನಗಳ ಬಾಡಿಗೆ ನೀಡುತ್ತದೆ ಎನ್ನುವುದನ್ನು ನೋಡಬೇಕು.