ಬೆಂಗಳೂರು : 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೂ ಕೂಡ ಎಲ್ಲರಂತೆ ಮತದಾನ ಮಾಡವ ಹಕ್ಕಿದೆ. ಆದ್ದರಿಂದ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಭಾರತೀಯ ಚುನಾವಣಾ ಆಯೋಗ , ಚುನಾವಣೆ ದಿನ ವಿಕಲಚೇತನರಿಗೆ ವಿಶೇಷ ಸೌಲಭ್ಯವೊಂದನ್ನು ಕಲ್ಪಿಸಿದೆ.
ಆ ಮೂಲಕ ವಿಕಲಚೇತನ ಮತದಾರರಿಗೆ ಮತದಾನದ ದಿನ ಅವರ ಮನೆ ಬಾಗಿಲಿನಿಂದ ಮತಗಟ್ಟೆಗೆ ಕರೆದೊಯ್ದು ಮತ್ತೆ ಅವರ ಮನೆಗೆ ಕರೆತರಲು ಭಾರತೀಯ ಚುನಾವಣಾ ಆಯೋಗ ವಾಹನ ಸೌಲಭ್ಯವನ್ನು ಒದಗಿಸಿದೆ.
ರಾಜ್ಯದಲ್ಲಿ ನಡೆಯುವ ಉಪವಚುನಾವಣೆ ಸಂದರ್ಭದಲ್ಲಿ ಅಂದರೆ ಮತದಾನದ ದಿನ ನವೆಂಬರ್ 3 ರಂದು ಕೂಡ ವಿಕಲಚೇತರಿಗೆ ವಾಹನ ಸೌಕರ್ಯ ಸಿಗಲಿದೆ. ಈ ಮೂಲಕ ವಿಕಲಚೇತನರಿಗೂ ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶವನ್ನು ಚುನಾವಣಾ ಆಯೋಗ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.