ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ಗೆ ಆಯೋಗ ತಯಾರಿ ನಡೆದಿದೆ. ಚುನಾವಣಾ ಆಯೋಗದಿಂದ ಇಂದು ಮಹತ್ವದ ಸಭೆ ನಡೆಸಲಾಗಿದೆ...ಅಸೆಂಬ್ಲಿ ಎಲೆಕ್ಷನ್ ಡೇಟ್ ಫಿಕ್ಸ್ಗೆಈಗಾಗಲೇ ಚುನಾವಣಾ ಆಯೋಗ ತಯಾರಿ ಮಾಡಿದ್ದು, ಮುಖ್ಯ ಚುನಾವಣಾ ಆಯುಕ್ತರ ತಂಡದಿಂದ ಇಂದು ಮಹತ್ವದ ಮೀಟಿಂಗ್ ನಡೆಸಲಾಗಿದೆ . ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜತೆ ವಿಕಾಸ ಸೌಧ ದಲ್ಲಿ ಇಂದು ಮಧ್ಯಾಹ್ನ 2.30ರಿಂದ ಸಂಜೆ 5:30 ರವರೆಗೆ ಒನ್ ಟು ಒನ್ ಸಭೆ ಮಾಡಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಸಲಹೆ, ಅಭಿಪ್ರಾಯ ಸಂಗ್ರಹ ಮಾಡಿದೆ.ಇನ್ನೂ ಮಾರ್ಚ್ 10 ರಂದು ಜಿಲ್ಲಾ ಚುನಾವಣಾಧಿಕಾರಿಗಳ ಜತೆ ಪೂರ್ವಭಾವಿ ಸಭೆ ಮಾಡಿ, ಮಾರ್ಚ್ 11ರಂದೂ ಕರ್ನಾಟಕದಲ್ಲೇ ಜಾಗೃತಿ ಕಾರ್ಯಕ್ರಮ ಮೂಡಿಸುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ಚುನಾವಣಾ ಅಧಿಸೂಚನೆ ಫಿಕ್ಸ್ ಆಗಲಿದೆ. ಏಪ್ರಿಲ್ ಮೂರನೇ ವಾರ ಅಥವಾ 4ನೇ ವಾರದಲ್ಲಿ ಎಲೆಕ್ಷನ್ ನಡೆಯಲಿದ್ದು, ಆಯೋಗ ನಾಳೆಯೇ ಎಲೆಕ್ಷನ್ ಮುಹೂರ್ತ ಡಿಸೈಡ್ ಮಾಡಲಿದೆ. ಕರ್ನಾಟಕದಿಂದ ವಾಪಸ್ ಆದ ತಕ್ಷಣೆ ಡೇಟ್ ಅನೌನ್ಸ್ ಸಾಧ್ಯತೆಗಳಿವೆ ಎಂಬುದು ತಿಳಿದು ಬಂದಿದೆ ಇನ್ನೂ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ತಂಡ, ಚುನಾವಣಾ ಆಯುಕ್ತರಾದ ಅನೂಪ್ ಚಂದ್ರ ಪಾಂಡೆ, ಅರುಣ್ ಗೋಯಲ್ ಸಾಥ್, ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು