Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಕ್ಷಗಾನ ವೇದಿಕೆಯಲ್ಲಿ ರಾಹುಲ್ ಗಾಂಧಿ ಲೇವಡಿ! ಚುನಾವಣಾ ಆಯೋಗ ನೋಟಿಸ್

ಯಕ್ಷಗಾನ ವೇದಿಕೆಯಲ್ಲಿ ರಾಹುಲ್ ಗಾಂಧಿ ಲೇವಡಿ! ಚುನಾವಣಾ ಆಯೋಗ ನೋಟಿಸ್
ಮಂಗಳೂರು , ಬುಧವಾರ, 4 ಏಪ್ರಿಲ್ 2018 (12:00 IST)
ಮಂಗಳೂರು: ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳಕ್ಕೆ ಚುನಾವಣೆ ಆಯೋಗ ನೋಟಿಸ್ ಜಾರಿ ಮಾಡಿದೆ. ಅದಕ್ಕೆ ಕಾರಣವೇನು ಗೊತ್ತಾ? ನಿಮಗೆ ಅಚ್ಚರಿಯಾಗಬಹುದು.

ಯಕ್ಷಗಾನದಲ್ಲಿ ಇತ್ತೀಚೆಗೆ ಬೇರೆ ಬೇರೆ ರಂಗಪ್ರಯೋಗ ನಡೆಯುತ್ತಿದೆ. ಆದರೆ ಕಟೀಲು ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಜನಾಶೀರ್ವಾದ ಯಾತ್ರೆಯಲ್ಲಿ ಇವನರ್ವ ಇವನರ್ವ ಎಂದು ಕನ್ನಡದಲ್ಲಿ ಭಾಷಣ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ಸಂಭಾಷಣೆಯನ್ನು ಬಳಸಲಾಗುತ್ತಿದೆ.

ಕಟೀಲು ದೇವಾಲಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಾಲಯವಾದ ಕಾರಣ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಪ್ರದರ್ಶನಗಳಲ್ಲಿ ಈ ಸಂಭಾಷಣೆಯನ್ನು ಬಳಸದಂತೆ ಖಡಕ್ ಆಗಿ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತಾ ಶಾ ಬಳಿಕ ರಾಹುಲ್ ಗಾಂಧಿಯಿಂದ ಲಿಂಗಾಯತ ಸಮುದಾಯಕ್ಕೆ ಬೆಣ್ಣೆ ಹಚ್ಚುವ ಕೆಲಸ