ಎಚ್3 ಎನ್2 ಸೋಂಕು ತಗುಲಿ ಹಾಸನ ಮೂಲದ 85 ವರ್ಷದ ವೃದ್ಧನೊಬ್ಬ ಬಲಿಯಾಗಿದ್ದಾರೆ. ಇದು H3N2 ಸೋಂಕಿನಿಂದ ಮೃತಪಟ್ಟ ರಾಜ್ಯದ ಮೊದಲ ಪ್ರಕರಣವಾಗಿದೆ. ಜ್ವರ, ಗಂಟಲು ಸಮಸ್ಯೆಯಿಂದ ಹಾಸನದ ಆಲೂರಿನಲ್ಲಿ ವೃದ್ಧ 7 ಮಾರ್ಚ್ 1ರಂದು ಮೃತರಾಗಿದ್ದರು. ವೃದ್ಧನ ಸಾವಿಗೆ ಎಚ್ ಎನ್ ಕಾರಣ ಎಂಬ ಬಗ್ಗೆ ವರದಿ ಬಂದ ಬಳಿಕ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಖಚಿತಪಡಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಹಾಸನದಲ್ಲಿ ಮೊದಲ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆಯುಕ್ತರು ದೃಢಪಡಿಸಿದ್ದಾರೆ. 60 ವರ್ಷದ ಮೇಲ್ಪಟ್ಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಮೊದಲ ಸಾವಿನ ಬಗ್ಗೆ ಸಂಪೂರ್ಣ ವರದಿ ನೀಡಲು ಮುಂದಾಗಿದ್ದು ಯಾರೂ ಕೂಡ, ಸ್ವಯಂಪ್ರೇರಿತ ಚಿಕಿತ್ಸೆ ಪಡೆದುಕೊಳ್ಳದೆ, ವೈದ್ಯರನ್ನು ಸಂಪರ್ಕಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.