Publish Date: Thu, 29 Jun 2023 (20:30 IST)
Updated Date: Thu, 29 Jun 2023 (20:58 IST)
ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್, ಕಳೆದ ಒಂದು ವಾರದಿಂದ ಕೋಳಿ ಮೊಟ್ಟೆ ಬೆಲೆಯಲ್ಲ 1.50 ರೂ. ಏರಿಕೆಯಾಗಿದೆ. ಕೋಳಿ ಆಹಾರ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೊಟ್ಟೆ ಉತ್ಪಾದನೆ ಇಳಿಕೆಯಾಗಿದ್ದು, ಒಂದೇ ವಾರದಲ್ಲಿ ಒಂದು ಮೊಟ್ಟೆ ಬೆಲೆಯಲ್ಲಿ 1.50 ರೂ. ಏರಿಕೆಯಾಗುವ ಮೂಲಕ 7 ರೂ. ತಲುಪಿದೆ. ಕೋಳಿ ಸಾಕಾಣೆಗೆ ಅಗತ್ಯವಿರುವ ಸೋಯಾಬಿನ್, ಮೆಕ್ಕೆಜೋಳ ಸೇರಿದಂತೆ ಮತ್ತಿತರ ಆಹಾರ ಪದಾರ್ಥಗಳ ಬೆಲೆಯಲ್ಲಿ ಶೇ. 10 ರಿಂದ 15 ರವರೆಗೆ ಹೆಚ್ಚಳವಾಗಿರುವ ಪರಿಣಾಮ ಜೂನ್ ಅಂತ್ಯದಲ್ಲಿ 5 ರೂ. ಇದ್ದ ಕೋಳಿ ಮೊಟ್ಟೆ ಬೆಲೆ ಇದೀಗ 6.50 ರೂ.ಗೆ ಏರಿಕೆಯಾಗಿದೆ.