Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆತ್ತಲೆ ಮೆರವಣಿಗೆ ಪ್ರಕರಣ ಪ್ರತಿಧ್ವನಿ : ಚಾಮರಾಜನಗರ ಬಂದ್ ಯಶಸ್ವಿ

ಬೆತ್ತಲೆ ಮೆರವಣಿಗೆ ಪ್ರಕರಣ ಪ್ರತಿಧ್ವನಿ :  ಚಾಮರಾಜನಗರ ಬಂದ್ ಯಶಸ್ವಿ
ಚಾಮರಾಜನಗರ , ಮಂಗಳವಾರ, 25 ಜೂನ್ 2019 (19:24 IST)
ದಲಿತ ಯುವಕನ ಬೆತ್ತಲೆ ಮೆರವಣಿಗೆ, ಹಲ್ಲೆ ಪ್ರಕರಣ ಹಾಗೂ ಸಂತೇಮರಹಳ್ಳಿಯಲ್ಲಿ 2015 ರಂದು ನಡೆದ ದಲಿತರಿಬ್ಬರ ಬರ್ಬರ ಹತ್ಯೆ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಚಾಮರಾಜನಗರ ಬಂದ್ ಯಶಸ್ವಿಯಾಗಿದೆ.

ದಲಿತ ಪ್ರಗತಿಪರ ಸಂಘಟನೆಗಳು ಸ್ವಯಂ ಪ್ರೇರಿತ ಬಂದ್ ಕರೆ ನೀಡಿದ್ದ ಹಿನ್ನಲೆಯಲ್ಲಿ ಚಾಮರಾಜನಗರ ದಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿದ್ದರು.

ಖಾಸಗಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಪ್ರಯಾಣಿಕರು ಪರದಾಡುವಂತಾಯಿತು. ಕೆ.ಎಸ್.ಆರ್.ಟಿ ಸಿ ಬಸ್ ಗಳು ಎಂದಿನಂತೆ ಸಂಚಾರ ನಡೆಸಿದವು. ಚಾಮರಾಜನಗರ ಬಂದ್ ಪ್ರಯುಕ್ತ ಬೆಳ್ಳಂ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಜಮಾಯಿಸಿದ ದಲಿತ ಪ್ರಗತಿಪರ ಸಂಘಟನೆಗಳು, ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದರು.

ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಬಿನ ಗದ್ದೆಯಲ್ಲಿ ಆತ ಹೆಣವಾಗಿದ್ದು ಏಕೆ?