Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾಲು ಸಾಲು ಪ್ರಕರಣ ವರದಿಯ ಬೆನ್ನಲ್ಲೇ ಎಚ್ಚೆತ್ತಾ ಬಿ ಎಂ ಆರ್.ಸಿ ಎಲ್

metro

geetha

bangalore , ಸೋಮವಾರ, 8 ಜನವರಿ 2024 (14:42 IST)
ಮೆಟ್ರೋ ಟ್ರ್ಯಾಕ್ ಗಳಿಂದ ಪ್ರಯಾಣಿಕರನ್ನ ದೂರವಿಸಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ.ಅನಾಹುತ ತಪ್ಪಿಸಲು ಎಲ್ಲಾ ಮೆಟ್ರೋ ಸ್ಟೇಷನ್ ಗಳಿಗೂ ಪಿಎಸ್ಡಿ ಅಳವಡಿಸಲು ಪ್ಲಾನ್ ನಡೆದಿದ್ದು,PSD-ಫ್ಲಾಟ್ ಫಾರಂ ಸ್ಕ್ರೀನ್ ಡೋರ್(ಫ್ಲಾಟ್ ಫಾರಂ ನಿಂದ ಟ್ರ್ಯಾಕ್ ನಡುವೆ ತಡೆಗೋಡೆ ರೀತಿ ಕೆಲಸ ಮಾಡುತ್ತೆ)ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ಸದ್ಯ ಪಿಎಅ್ ಡಿ ಅಳವಡಿಕೆಯಾಗಿದೆ.ಕೋನಪ್ಪನ ಅಗ್ರಹಾರ ಬಳಿ  ಇನ್ಫೋಸಿಸ್ ಫೌಂಡೇಶನ್ ನಿಂದ PSD ಅಳವಡಿಸಲಾಗಿದೆ.ಮೆಟ್ರೋದಲ್ಲಿ ಕಳೆದ ಎರಡು ತಿಂಗಳಿನಲ್ಲಿ ಸಾಲು ಸಾಲು ಸಮಸ್ಯೆಯಾಗಿದೆ.

ರಾಜಾಜಿನಗರ ಮೆಟ್ರೋ ಸ್ಟೇಷನ್ ನಲ್ಲಿ ಪಕ್ಕದ ಟ್ರ್ಯಾಕ್ ಗೆ ಮೆಟ್ರೋ ಹತ್ತಲು ಟ್ರ್ಯಾಕ್ ಗೆ ವ್ಯಕ್ತಿ ಇಳಿದಿದ್ದಾರೆ.ಕಳೆದ ತಿಂಗಳು ಮೊಬೈಲ್ ತೆಗೆಯಲು ಮಹಿಳೆ ಟ್ರ್ಯಾಕ್ ಗೆ ಜಿಗಿದಿದ್ದರು.ಶುಕ್ರವಾರ ಯುವವಕನಿಂದ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನ ನಡೆದಿದೆ.ನಿನ್ನೆ ಮೆಟ್ರೋ ಟ್ಯಾಕ್ ಮೇಲೆ  ಬೆಕ್ಕು ಕುಳಿತು ಕೆಲ ಕಾಲ ಆತಂಕ ಉಂಟಾಗಿತ್ತು.ಈ ರೀತಿಯ ಘಟನೆಯಿಂದ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ಪೀಕ್ ಅವರ್‌ಗಳಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಗೆ ಅಡಚಣೆಗೆಯಾಗುತ್ತೆ.ಇದನ್ನ ತಡೆಯಲು ಬಿಎಂಆರ್ ಸಿಎಲ್ ನಿಂದ ಪಿಎಸ್ ಡಿ ಅಳವಡಿಕೆಗೆ ಮುಂದಾಗಿದೆ.ಸದ್ಯ ಬೆಂಗಳೂರು ನಗರದಲ್ಲಿ 63 ಸ್ಟೇಷನ್ ಗಳು ಕಾರ್ಯಾನಿರ್ವಹಿಸ್ತೀವೆ
 
 PSDಯಿಂದ ಏನೇನು ಪ್ರಯೋಜನ? ಅನೋದಾದ್ರೆ ಮೆಟ್ರೋದಲ್ಲಾಗುವ ಅವಘಡಗಳಿಗೆ ಪಿಎಎಸ್‌ಡಿ ಬ್ರೇಕ್‌ ಹಾಕುತ್ತೆ.ಎಸಿಯಿಂದ ಆಗುವ ಮೂವತ್ತು ಪರ್ಸೆಂಟ್ ವೆಚ್ಚ ಉಳಿತಾಯ ಆಗುತ್ತಂತ್ತೆ.ಹಳಿ ಸಮೀಪದಲ್ಲಿ ಫೋಟೊ ತೆಗೆಯುವುದು, ರೀಲ್ಸ್‌ ಮಾಡುವುದನ್ನು ತಪ್ಪಿಸಬಹುದು.ಮಕ್ಕಳು ಪೋಷಕರ ಕಣ್ತಪ್ಪಿಸಿ ಹಳಿಗಳತ್ತ ಹೋಗಿ ಆಗುವ ಅನಾಹುತ ನಿಲ್ಲುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರಲ್ಲಿ ಆತಂಕ