ಬಿಸಿಲ ಬೇಗೆ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದ ಹಲವೆಡೆ ಭೂಕಂಪನದ ಅನುಭವವಾಗಿದೆ. ರಾಮನಗರ, ಕನಕಪುರ, ಚನ್ನಪಟ್ಟಣ, ಚಾಮರಾಜನಗರ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಸತ್ತೇಗಾಲದ ಸುತ್ತಮುತ್ತ ಭೂಮಿ ಕಂಪಿಸಿದೆ. ಮನೆಯ ಪಾತ್ರೆ ಸಾಮಾನುಗಳೂ ನೆಲಕ್ಕೆ ಬಿದ್ದಿವೆ.
ಮಂಡ್ಯ ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವವಾಗಿದೆ. ಮದ್ದೂರು ಮತ್ತು ಮಳವಳ್ಳಿಯ ಹಲವೆಡೆ ಕಂಪನದ ಅನುಭವವಾಗುತ್ತಿದ್ದಂತೆ ಜನ ಮನೆ ಬಿಟ್ಟು ಓಡಿ ಬಂದಿದ್ದಾರೆ. ಬೆಳಗ್ಗೆ 7.35ರ ಸುಮಾರಿಗೆ ಮೂರ್ನಾಲ್ಕು ನಿಮಿಷಗಳ ಕಾಲ ಭೂಮಿ ಕಂಪಿಸಿದೆ. ಐದಾರು ಮನೆಗಳು ಬಿರುಕು ಬಿಟ್ಟ ಬಗ್ಗೆ ವರದಿಯಾಗಿದೆ.
ಇತ್ತ, ಉದ್ಯಾನಗರಿ ಬೆಂಗಳೂರಿನಲ್ಲೂ ಭೂಕಂಪನದ ಅನುಭವವಾಗಿದೆ. ಮಲ್ಲೇಶ್ವರಂ, ರಾಜರಾಜೇಶ್ವರಿನಗರ, ಯಲಹಂಕ ನ್ಯೂಟೌನ್, ಕೆಂಗೇರಿ, ಹನುಮಂತನಗರ, ಶ್ರೀನಗರ ಸೇರಿದಂತೆ ಹಲವೆಡೆ ಭೂಮಿ ನಡು ಗಿದ ಅನುಭವವಾಗಿದ