ಚೆನ್ನೈ: ತಮಳುನಾಡಿನಲ್ಲಿ ಮತ್ತೆ ರಾಜಕೀಯ ಮೇಲಾಟ ನಡೆಯುವ ಸ್ಪಷ್ಟ ಸೂಚನೆ ಲಭಿಸಿದೆ. ಎಐಎಡಿಎಂಕೆ ಶಶಿಕಲಾ ನಟರಾಜನ್ ಬಣದ ಟಿಟಿವಿ ದಿನಕರನ್ ಮೇಲೆ ದೆಹಲಿ ಪೊಲೀಸರು ಅರೆಸ್ಟ್ ವಾರಂಟ್ ಜಾರಿ ಮಾಡಿದ್ದಾರೆ.
ಚುನಾವಣಾ ಚಿಹ್ನೆ ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬಂಧಿಸಲು ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಹೀಗಾಗಿ ವಿರೋಧಿ ಒ ಪನೀರ್ ಸೆಲ್ವಂ ಬಣದ ಜತೆಗೆ ಒಂದಾಗಲು ಶಾಸಕರು ಸಭೆಯಲ್ಲಿ ತೊಡಗಿದ್ದಾರೆ.
ಎಐಎಡಿಎಂಕೆ ಪಕ್ಷದ ಉಪ ಕಾರ್ಯದರ್ಶಿ ದಿನಕರನ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಪಕ್ಷ ಹೋಳಾಗದಂತೆ ತಡೆಯಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಅನುಸರಿಸುವುದಾಗಿ ಶಾಸಕರು ಯತ್ನ ನಡೆಸಿದ್ದಾರೆ. ಹೀಗಾಗಿ ತಮಿಳುನಾಡು ರಾಜಕೀಯದಲ್ಲಿ ಎಂತಹ ಬದಲಾವಣೆಯಾಗುತ್ತದೆ ಎಂದು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ