Webdunia - Bharat's app for daily news and videos

Install App

ನಗರದಲ್ಲಿ ಇದ್ದು ಇಲ್ಲದಂತಾದ ಇ – ಶೌಚಾಲಯ

Webdunia
ಗುರುವಾರ, 8 ಜೂನ್ 2023 (18:55 IST)
ಪ್ರತಿ ವರ್ಷ ಸ್ವಚ್ಛ ಭಾರತ ಸಮೀಕ್ಷೆ ಬಂದಾಗ ಪಾಲಿಕೆ ನಿದ್ದೆಯಿಂದ ಎದ್ದವರಂತೆ ಚುರುಕಾಗುತ್ತದೆ. ಸ್ವಚ್ಚತೆಗಾಗಿ ಹಲವು ಕೆಲಸ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡುತ್ತದೆ. ಆದ್ರೆ ಈಗ ಇ – ಶೌಚಾಲಯ ನಿರ್ಮಿಸಿ  ಯಾವ ಪ್ರಯೋಜನವು ಇಲ್ಲದಂತಿದೆ. ಕೆಲವು ಕಡೆ ಕೆಟ್ಟು ನಿಂತರೆ ಕೆಲವೆಡೆ ಸಾರ್ವಜನಿಕವಾಗಿ ಬಳಸಿಕೊಳ್ಳುತ್ತಿಲ್ಲ.
 
ಸ್ವಚ್ಚತೆಗಾಗಿ ಹಲವು ಕೆಲಸ ಕಾರ್ಯಗಳನ್ನು ಇ ಶೌಚಾಲಯ ಸಮರೋಪಾದಿಯಲ್ಲಿ ಮಾಡುತ್ತದೆ. ತಂತ್ರಜ್ಞಾನ ಆಧಾರಿತ ಸ್ವಯಂಪ್ರೇರಿತವಾಗಿ ಸ್ವಚ್ಛ ಸಾಮರ್ಥ್ಯವಿರುವ ಇ-ಶೌಚಾಲಯವನ್ನು ಉಳಿಸಿಕೊಳ್ಳುವುದು ಬಿಬಿಎಂಪಿಗೆ ದೊಡ್ಡ ತಲೆನೋವಾಗಿದೆ. ಬಿಬಿಎಂಪಿ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗೆ ಉಪಯೋಗವಾಗ್ಲಿ ಅನ್ನುವ ಉದ್ದೇಶದಿಂದ ಮತ್ತು ಪರಿಸರಸ್ನೇಹಿ ಮತ್ತು ಸಾರ್ವಜನಿಕರ ತುರ್ತು ಅಗತ್ಯಕ್ಕೆ ಪೂರಕವಾಗಿ  ನಿರ್ಮಿಸಲಾಗಿತ್ತು. ಎರಡು ಹಂತಗಳಲ್ಲಿ 169 ಕಡೆ ಈ ಶೌಚಾಲಯವನ್ನು ಪ್ರಾರಂಭಿಸಿತ್ತು ಆದರೆ ಕೆಲವು ಕಡೆ ಇ ಶೌಚಾಲಯ ಕೆಟ್ಟು ನಿಂತರೆ ಮತ್ತೆ ಕೆಲವೆಡೆ ಸಾರ್ವಜನಿಕವಾಗಿ ಬಳಸಿಕೊಳ್ಳುತ್ತಿಲ್ಲ ಅನ್ನುವ ಮಾತು ಇದೆ.
 
ಬಿಬಿಎಂಪಿ ಮೊದಲ ಹಂತದಲ್ಲಿ 87 ಮತ್ತು ಎರಡನೇ ಹಂತದಲ್ಲಿ 82 ಶೌಚಾಲಯವನ್ನು ಪರಿಚಯಿಸಿತ್ತು. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಇ – ಶೌಚಾಲಯ ಪರಿಚಯಿಸಿದ ಮೇಲೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸಾರ್ವಜನಿಕರು ಈ ಶೌಚಾಲಯವನ್ನು ಬಳಸದೆ ಅದರ ಹಿಂದೆ ಹೋಗಿ ಮೂತ್ರವಿಸರ್ಜನೆ ಮಾಡುತ್ತಿರುವುದರಿಂದ ಮತ್ತಷ್ಟು ಅವಮಾನಕ್ಕೀಡಾಗಿದೆ. 
 
 ಬೆಂಗಳೂರು ನಗರಕ್ಕೆ ಇ – ಶೌಚಾಲಯಗಳ ಅವಶ್ಯಕತೆ ಇರಲಿಲ್ಲ. ಇರುವಂತಹ ಇ – ಶೌಚಾಲಯಗಳನ್ನು ಸಾರ್ವಕನಿಕರು  ಬಳಸಿಕೊಳ್ಳುತ್ತಿಲ್ಲ . ಅಧಿಕಾರಿಗಳು ಹಣ ದೋಚುವ ನೆಪಕ್ಕೆ ಈ  ರೀತಿ ನಿರ್ಮಾಣ ಮಾಡಿ ಕೈ ಬಿಡ್ಡಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡದ್ದಾರೆ.
 
 ಎಲ್ಲಾ ಕಾರಣಗಳಿಗಾಗಿ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಬೆಂಗಳೂರು ಉತ್ತಮ ಸ್ಥಾನ ಪಡೆಯಲು ಆಗುತ್ತಿಲ್ಲ.ಕೆಲವು ಕಡೆ ಹೇಳಿಕೊಳ್ಳುವಂತಹ ಸ್ವಚ್ಛತೆ  ಇ – ಶೌಚಾಲಯಗಳಲ್ಲಿ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ಕ್ರಮಕ್ಕೆ ಮುಂದಾಗುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments