ಸ್ವಚ್ಚತೆಗಾಗಿ ಹಲವು ಕೆಲಸ ಕಾರ್ಯಗಳನ್ನು ಇ ಶೌಚಾಲಯ ಸಮರೋಪಾದಿಯಲ್ಲಿ ಮಾಡುತ್ತದೆ. ತಂತ್ರಜ್ಞಾನ ಆಧಾರಿತ ಸ್ವಯಂಪ್ರೇರಿತವಾಗಿ ಸ್ವಚ್ಛ ಸಾಮರ್ಥ್ಯವಿರುವ ಇ-ಶೌಚಾಲಯವನ್ನು ಉಳಿಸಿಕೊಳ್ಳುವುದು ಬಿಬಿಎಂಪಿಗೆ ದೊಡ್ಡ ತಲೆನೋವಾಗಿದೆ. ಬಿಬಿಎಂಪಿ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗೆ ಉಪಯೋಗವಾಗ್ಲಿ ಅನ್ನುವ ಉದ್ದೇಶದಿಂದ ಮತ್ತು ಪರಿಸರಸ್ನೇಹಿ ಮತ್ತು ಸಾರ್ವಜನಿಕರ ತುರ್ತು ಅಗತ್ಯಕ್ಕೆ ಪೂರಕವಾಗಿ ನಿರ್ಮಿಸಲಾಗಿತ್ತು. ಎರಡು ಹಂತಗಳಲ್ಲಿ 169 ಕಡೆ ಈ ಶೌಚಾಲಯವನ್ನು ಪ್ರಾರಂಭಿಸಿತ್ತು ಆದರೆ ಕೆಲವು ಕಡೆ ಇ ಶೌಚಾಲಯ ಕೆಟ್ಟು ನಿಂತರೆ ಮತ್ತೆ ಕೆಲವೆಡೆ ಸಾರ್ವಜನಿಕವಾಗಿ ಬಳಸಿಕೊಳ್ಳುತ್ತಿಲ್ಲ ಅನ್ನುವ ಮಾತು ಇದೆ.
ಬಿಬಿಎಂಪಿ ಮೊದಲ ಹಂತದಲ್ಲಿ 87 ಮತ್ತು ಎರಡನೇ ಹಂತದಲ್ಲಿ 82 ಶೌಚಾಲಯವನ್ನು ಪರಿಚಯಿಸಿತ್ತು. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಇ – ಶೌಚಾಲಯ ಪರಿಚಯಿಸಿದ ಮೇಲೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸಾರ್ವಜನಿಕರು ಈ ಶೌಚಾಲಯವನ್ನು ಬಳಸದೆ ಅದರ ಹಿಂದೆ ಹೋಗಿ ಮೂತ್ರವಿಸರ್ಜನೆ ಮಾಡುತ್ತಿರುವುದರಿಂದ ಮತ್ತಷ್ಟು ಅವಮಾನಕ್ಕೀಡಾಗಿದೆ.
ಬೆಂಗಳೂರು ನಗರಕ್ಕೆ ಇ – ಶೌಚಾಲಯಗಳ ಅವಶ್ಯಕತೆ ಇರಲಿಲ್ಲ. ಇರುವಂತಹ ಇ – ಶೌಚಾಲಯಗಳನ್ನು ಸಾರ್ವಕನಿಕರು ಬಳಸಿಕೊಳ್ಳುತ್ತಿಲ್ಲ . ಅಧಿಕಾರಿಗಳು ಹಣ ದೋಚುವ ನೆಪಕ್ಕೆ ಈ ರೀತಿ ನಿರ್ಮಾಣ ಮಾಡಿ ಕೈ ಬಿಡ್ಡಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡದ್ದಾರೆ.
ಎಲ್ಲಾ ಕಾರಣಗಳಿಗಾಗಿ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಬೆಂಗಳೂರು ಉತ್ತಮ ಸ್ಥಾನ ಪಡೆಯಲು ಆಗುತ್ತಿಲ್ಲ.ಕೆಲವು ಕಡೆ ಹೇಳಿಕೊಳ್ಳುವಂತಹ ಸ್ವಚ್ಛತೆ ಇ – ಶೌಚಾಲಯಗಳಲ್ಲಿ ಇಲ್ಲದಂತಾಗಿದೆ.