Webdunia - Bharat's app for daily news and videos

Install App

ದಸರ ವಿಶೇಷ: ಅರಸೀಕೆರೆ- ಮೈಸೂರು ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಗುಡ್‌ನ್ಯೂಸ್‌

Sampriya
ಬುಧವಾರ, 9 ಅಕ್ಟೋಬರ್ 2024 (14:53 IST)
Photo Courtesy X
ಬೆಂಗಳೂರು: ವಿಶ್ವಾವಿಖ್ಯಾತ ನಾಡಹಬ್ಬ ದಸರಾ ಹಿನ್ನೆಲೆ ಅರಸೀಕೆರೆ-ಮೈಸೂರು ನಡುವೆ ಮೂರು ದಿನ ಮೂರುಟ್ರಿಪ್ ಡೆಮು ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ನಿರ್ಧಾರ ಕೈಗೊಂಡಿದೆ.

ಅಕ್ಟೋಬರ್ 10, 11 ಮತ್ತು 12 ರಂದು ಅರಸೀಕೆರೆ  ಮತ್ತು ಮೈಸೂರು  ನಿಲ್ದಾಣಗಳ ನಡುವೆ ಎರಡೂ ದಿಕ್ಕುಗಳಲ್ಲಿ ಮೂರು ಟ್ರಿಪ್ ಡೆಮು ವಿಶೇಷ ರೈಲು ಓಡಾಟ ನಡೆಸಲಿದೆ.

ರೈಲು ಸಂಖ್ಯೆ 06207 ಅರಸೀಕೆರೆ-ಮೈಸೂರು ಡೆಮು ವಿಶೇಷ ರೈಲು ಅರಸೀಕೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು, ಅದೇ ದಿನ ಸಂಜೆ 6:40ಕ್ಕೆ ಮೈಸೂರು ತಲುಪಲಿದೆ. ರೈಲು ಸಂಖ್ಯೆ 06208 ಮೈಸೂರು-ಅರಸೀಕೆರೆ ಡೆಮು ವಿಶೇಷ ರೈಲು ಮೈಸೂರಿನಿಂದ ಸಂಜೆ 6:50ಕ್ಕೆ ಹೊರಟು ಅದೇ ದಿನ ರಾತ್ರಿ 11:43ಕ್ಕೆ ಅರಸೀಕೆರೆ ತಲುಪಲಿದೆ.

ಹಬ್ಬನಘಟ್ಟ, ಬಾಗೇಶಪುರ, ಹಾಸನ, ಮಾವಿನಕೆರೆ, ಹೊಳೆ ನರಸೀಪುರ, ಅನ್ನೇಚಾಕನಹಳ್ಳಿ ಹಾಲ್ಟ್, ಶ್ರವಣೂರು ಹಾಲ್ಟ್, ಮಂದಗೆರೆ, ಬಿರಹಳ್ಳಿ ಹಾಲ್ಟ್, ಅಕ್ಕಿಹೆಬ್ಬಾಳು, ಹೊಸ ಅಗ್ರಹಾರ, ಅರ್ಜುನಹಳ್ಳಿ ಹಾಲ್ಟ್, ಹಂಪಾಪುರ, ಕೃಷ್ಣರಾಜನಗರ, ಡೋರನಹಳ್ಳಿ, ಸಾಗರಕಟ್ಟೆ, ಕಲ್ಲೂರು ಎಡಹಳ್ಳಿ ಹಾಲ್ಟ್, ಕೃಷ್ಣರಾಜಸಾಗರ, ಮತ್ತು ಬೆಳಗುಳ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಪಾಕಿಸ್ತಾನದ ಮುಂದೆ ನಮ್ಮ ಎಷ್ಟು ವಿಮಾನ ಕಳೆದುಕೊಂಡಿತು ಲೆಕ್ಕ ಕೊಡಿ

ಟರ್ಕಿ ಸೇಬು ಬಹಿಷ್ಕಾರಕ್ಕೆ ಹೆಚ್ಚಿದ ಒತ್ತಾಯ: 24ರಂದು ಪ್ರಧಾನಿಯೊಂದಿಗೆ ಚರ್ಚೆ

India Pakistan: ತಿನ್ನೋದು ಭಾರತದ ಅನ್ನ, ಸೇವೆ ಮಾತ್ರ ಪಾಕಿಸ್ತಾನಕ್ಕೆ: ಯುಪಿ ವ್ಯಕ್ತಿ ಅರೆಸ್ಟ್

ನಿಮ್ಮ ಪ್ರಾಮಾಣಿಕತೆಯನ್ನು ಮೆಚ್ಚಿದೆ: ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟ ಸಂಸದ ತೇಜಸ್ವಿ ಸೂರ್ಯ

I Stand With You: ಬೆಂಗಳೂರಿನ ಜನತೆಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments