ಬಸ್ ಚಲಾಯಿಸುತ್ತಿದ್ದ ಚಾಲಕನ ಆರೋಗ್ಯ ದಿಢೀರ್ ಕೈಕೊಟ್ಟಿದ್ದನ್ನು ಗಮನಿಸಿದ ಮಹಿಳಾ ಪ್ರಯಾಣಿಕರೊಬ್ಬರು ಖುದ್ದು ತಾವೇ ಬಸ್ ಚಲಾಯಿಸಿ ಚಲಾಕನನ್ನು ಆಸ್ಪತ್ರೆಗೆ ದಾಖಲಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯೋಗಿತಾ ಧರ್ಮೇಂದ್ರ ಸತವ್ ಎಂಬುವರು ಈ ಸಾಹಸ ತೋರಿದ್ದು, ಸುಮಾರು 10 ಕಿ.ಮೀ.ದೂರದವರೆಗೆ ಬಸ್ ಚಲಾಯಿಸಿ ಶಹಭಾಷ್ ಎನಿಸಿಕೊಂಡಿದ್ದಾರೆ.
ಪುಣೆಯ ವಾಘೋಲಿಯಿಂದ 22ರಿಂದ 23 ಮಹಿಳೆಯರ ತಂಡ ಶಿರೂರು ತಾಲೂಕಿನ ಮೊರಚಿ ಚಿಂಚೋಳಿಯಲ್ಲಿ ಟ್ರಿಪ್ ಹೋಗಿದ್ದಾಗ ಈ ಘಟನೆ ನಡೆದಿದೆ.
ಬಸ್ ಚಲಾಯಿಸಿ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ಯೋಗಿತಾ ಮತ್ತೊಬ್ಬ ಚಾಲಕನನ್ನು ಕರೆದು ಎಲ್ಲ ಮಹಿಳೆಯರನ್ನು ಸುರಕ್ಷಿತವಾಗಿ ವಾಘೋಲಿಗೆ ಕರೆದೊಯ್ದರು. ವಾಘೋಲಿ ಗ್ರಾಮದ ಮಾಜಿ ಸರಪಂಚರಾದ ಜಯಶ್ರೀ ಸತವ್ ಪಾಟೀಲ್ ಅವರು ತಮ್ಮ ಸಹೋದ್ಯೋಗಿ ಮತ್ತು ಪಿಕ್ನಿಕ್ ಆಯೋಜಕಿ ಆಶಾ ವಾಘಮಾರೆ ಅವರೊಂದಿಗೆ ಯೋಗಿತಾ ಸಾತವ್ ಅವರ ಮನೆಗೆ ತಲುಪಿ ಗೌರವಿಸಿದರು.
ಮಾಜಿ ಸರಪಂಚ್ ಜಯಶ್ರೀ ಸತವ್ ಪಾಟೀಲ್ ಮಾತನಾಡಿ, ಹಲವು ಮಹಿಳೆಯರು ನಾಲ್ಕು ಚಕ್ರದ ವಾಹನ ಚಲಾಯಿಸುತ್ತಾರೆ, ಆದರೆ ವಾಘೋಲಿಯ ಯೋಗಿತಾ ಅವರು ಅತ್ಯಂತ ಧೈರ್ಯದಿಂದ ಗಂಭೀರ ಸ್ಥಿತಿಯಲ್ಲಿ ಬಸ್ ಓಡಿಸುವ ಕೆಲಸವನ್ನು ಮಾಡಿದ್ದಾರೆ. ಅವರು ಬಸ್ ಚಾಲಕನ ಏಳು ಬಸ್‌ಗಳಲ್ಲಿದ್ದ ಎಲ್ಲ ಮಹಿಳೆಯರ ಪ್ರಾಣವನ್ನು ಉಳಿಸಿದ್ದಾರೆ.