Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ಮೂರನೇ ಅಲೆ ಬಗ್ಗೆ ಡಾ.ದೇವಿ ಪ್ರಸಾದ್ ಶೆಟ್ಟಿ

ಕೊರೊನಾ ಮೂರನೇ ಅಲೆ ಬಗ್ಗೆ ಡಾ.ದೇವಿ ಪ್ರಸಾದ್ ಶೆಟ್ಟಿ
bangalore , ಗುರುವಾರ, 2 ಡಿಸೆಂಬರ್ 2021 (20:07 IST)
ಮೊದಲ ಮತ್ತು ಎರಡನೇ ಅಲೆಗೆ ಆರು ತಿಂಗಳು ಸಮಯವಿತ್ತು. ಆಗ ವೇಗವಾಗಿ ಹರಡಿತ್ತು. ಆದರೆ ಇದು ಅದಕ್ಕಿಂತಲೂ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿದೆ. ವ್ಯಕ್ತಿ ಸಾವನ್ನಪ್ಪಿದರೆ, ವೈರಸ್ ಕೂಡಾ ಸತ್ತೋಗುತ್ತದೆ.ರಾಜ್ಯದಲ್ಲಿ ಕೊರೊನಾ (Coronavirus) ಮೂರನೇ ಅಲೆ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ಕೂಡಾ ಹೆಚ್ಚು ನಿಗಾ ವಹಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕೊರೊನಾ ಮೂರನೇ ಅಲೆ ಬಗ್ಗೆ ಉನ್ನತ ಮಟ್ಟದ ನುರಿತ ತಜ್ಞರ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ  ಕೆಲ ಮಾಹಿತಿ ನೀಡಿದ್ದಾರೆ. ವೈರಸ್ ಮ್ಯೂಟೇಟ್ ಆಗ್ತಾ ಚೇಂಜ್ ಆಗ್ತಾ ಇರುತ್ತದೆ. ಇದನ್ನು ನಿಲ್ಲಿಸಲು ಆಗಲ್ಲ. ಕೊರೊನಾ ಹೊಸ ತಳಿ ಬಗ್ಗೆ ಹೆದರುವ ಅಗತ್ಯವಿಲ್ಲ. ಆದರೆ ಇದು ಭಾರಿ ವೇಗವಾಗಿ ಹರಡುತ್ತದೆ ಅಂತ ತಿಳಿಸಿದರು.ಮೊದಲ ಮತ್ತು ಎರಡನೇ ಅಲೆಗೆ ಆರು ತಿಂಗಳು ಸಮಯವಿತ್ತು. ಆಗ ವೇಗವಾಗಿ ಹರಡಿತ್ತು. ಆದರೆ ಇದು ಅದಕ್ಕಿಂತಲೂ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿದೆ. ವ್ಯಕ್ತಿ ಸಾವನ್ನಪ್ಪಿದರೆ, ವೈರಸ್ ಕೂಡಾ ಸತ್ತೋಗುತ್ತದೆ. ಸಮಯ ಆದಂತೆ ಹರಡುವಿಕೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಮಾಹಿತಿ ನೀಡಿದ ಡಾ.ದೇವಿ ಪ್ರಸಾದ್ ಶೆಟ್ಟಿ, ಮೊದಲ ಅಲೆಯಲ್ಲಿ ಎಲ್ಲರೂ ಹೆದರಿಕೊಂಡು ವ್ಯಾಕ್ಸಿನ್ ತೆಗೆದುಕೊಂಡರು. ನಂತರ ಎರಡನೇ ಅಲೆಯಲ್ಲಿ ಸೆಕೆಂಡ್ ಡೋಸ್ ಅನ್ನು ನಿರ್ಲಕ್ಷಿಸಿದರು. ಆದರೆ ಹೀಗೆ ಮಾಡಬಾರದು. ಎಲ್ಲರೂ ಕಡ್ಡಾಯವಾಗಿ ಸೆಕೆಂಡ್ ಡೋಸ್ ತೆಗೆದುಕೊಳ್ಳಬೇಕು ಅಂದರು.ಮೊದಲ ಡೋಸ್ ಅಷ್ಟೊಂದು ರಕ್ಷಣೆ ನೀಡಲ್ಲ. ಎರಡನೇ ಡೋಸ್ ಹೆಚ್ಚು ಪರಿಣಾಮಕಾರಿಯಾಗಿದೆ. ಸರ್ಕಾರ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಅನುಮತಿಸಿದರೆ ತಕ್ಷಣ ತೆಗೆದುಕೊಳ್ಳಬೇಕು. ವಿದೇಶಗಳಲ್ಲಿ ವ್ಯಾಕ್ಸಿನ್ ತೆಗೆದುಕೊಂಡವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವ್ಯಾಕ್ಸಿನ್ ತೆಗೆದುಕೊಳ್ಳದವರು ಸಾವನ್ನಪ್ಪಿದ್ದಾರೆ. ಹೀಗಾಗಿ ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಅಂತ ತಿಳಿಸಿದರು.
 
ವ್ಯಾಕ್ಸಿನ್ ಖಾಲಿ ಆದ ನಂತರ ಸರ್ಕಾರವನ್ನು ನಿಂದಿಸಬಾರದು. ವ್ಯಾಕ್ಸಿನ್​ನ ಎಲ್ಲರೂ ತೆಗೆದುಕೊಂಡರೆ, ವ್ಯಾಕ್ಸಿನ್ ಖಾಲಿಯಾದರೆ ಕಂಪನಿಗಳು ಉತ್ಪಾದಿಸುತ್ತವೆ. ವ್ಯಾಕ್ಸಿನ್ ಉಳಿದರೆ ಕಂಪನಿಗಳು ತಯಾರಿಕೆ ನಿಲ್ಲಿಸುತ್ತವೆ. ಹಾಗಾಗಿ ಎಲ್ಲರೂ ಸ್ಟಾಕ್ ಇದ್ದಾಗಲೇ ವ್ಯಾಕ್ಸಿನ್​ ತೆಗೆದುಕೊಳ್ಳಬೇಕು. ಇನ್ನು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಅಂತ ಪ್ರಸಾದ್ ಶೆಟ್ಟಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಅಧಿಕಾರಿ ವಿರುದ್ಧ ಕೇಸ್