Select Your Language

Notifications

webdunia
webdunia
webdunia
webdunia

ಕ್ರಿಶ್ಚಿಯನ್ ಬ್ರಾಹ್ಮಣ ಎಂದರೆ ಯಾವ ಜಾತಿ ಹೇಳ್ರೀ: ಶಾಸಕ ಭರತ್ ಶೆಟ್ಟಿ ಪ್ರಶ್ನೆಗೆ ತೊದಲಿದ ಡಿಸಿ

Dr Bharath Shetty

Krishnaveni K

ಮಂಗಳೂರು , ಗುರುವಾರ, 18 ಸೆಪ್ಟಂಬರ್ 2025 (11:11 IST)
ಮಂಗಳೂರು: ಕ್ರಿಶ್ಚಿಯನ್ ಬ್ರಾಹ್ಮಣ  ಎಂದರೆ ಯಾವ ಜಾತಿ ಹೇಳಿ ಎಂದು ಮಂಗಳೂರು ನಗರ ಶಾಸಕ ಡಾ ಭರತ್ ಶೆಟ್ಟಿ ಪ್ರಶ್ನೆಗೆ ಡಿಸಿ ಉತ್ತರ ಹೇಳಲಾಗದೇ ತೊದಲಿದ್ದಾರೆ. ಈ ವಿಡಿಯೋವನ್ನು ಖುದ್ದು ಭರತ್ ಶೆಟ್ಟಿ ಹಂಚಿಕೊಂಡಿದ್ದಾರೆ.

ಜಾತಿಗಣತಿ ಬಗ್ಗೆ ನಗರದಲ್ಲಿ ಸಭೆಯಲ್ಲಿ ಸ್ಪೀಕರ್ ಯುಟಿ ಖಾದರ್, ಮಂಗಳೂರು ಡಿಸಿ ಸೇರಿದಂತೆ ಜನಪ್ರತಿನಿಧಿಗಳು, ನಾಗರಿಕರು ಸೇರಿದ್ದರು. ಈ ವೇಳೆ ಸಭೆಯಲ್ಲಿ ಡಾ ಭರತ್ ಶೆಟ್ಟಿ ಜಾತಿ ಕಾಲಂನಲ್ಲಿ ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಕುರುಬ ಎಂದೆಲ್ಲಾ ನಮೂದಾಗಿರುವುದನ್ನು ಪ್ರಶ್ನೆ ಮಾಡಿದ್ದಾರೆ.

ಇದ್ಯಾವುದು 'ಮಡಿವಾಳ ಕ್ರಿಶ್ಚಿಯನ್, ಬಂಟ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಗೌಡ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್' ಜಾತಿ ?

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಳ್ಳಲಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ರ ಸಲುವಾಗಿ ಕರ್ನಾಟಕ ರಾಜ್ಯದಲ್ಲಿ ಗುರುತಿಸಿರುವ ಜಾತಿ - ಉಪಜಾತಿಗಳ ಪಟ್ಟಿಯಲ್ಲಿ ಮಡಿವಾಳ ಕ್ರಿಶ್ಚಿಯನ್, ಬಂಟ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಗೌಡ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ಹಲವು ಹೆಸರು ಬಿಡುಗಡೆ ಮಾಡಿದ್ದಾರೆ. ಯಾವುದು ಈ ಹೊಸ ಜಾತಿಗಳು ?

ಈಗ ಶೈಕ್ಷಣಿಕ ದಾಖಲೆಗಳಿಗೆ ಜಾತಿ ಹೆಸರು ನಮೂದಿಸುವಾಗ ಕ್ರಿಶ್ಚಿಯನ್ ಎಂದು ಬರೆದರೂ ಸಾಕು. ಕ್ರಿಶ್ಚಿಯನ್ ನಲ್ಲಿ ಯಾವ ಜಾತಿ ಎಂದು ಬರೆಯಬೇಕಾಗಿಲ್ಲ. ಹಾಗಿರುವಾಗ ಇದೊಂದು ಜಾತಿ ಯಾಕೆ ಸೃಷ್ಟಿ ಮಾಡಿದ್ದೀರಿ ಎಂದು ಭರತ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಲು ಡಿಸಿ ತೊದಲಿದ್ದಾರೆ. ಈ ನಡುವೆ ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ಈ ಮೊದಲು ಯಾವ ಜಾತಿಯಲ್ಲಿದ್ದರು, ಈಗ ಯಾವ ಜಾತಿ ಎಂದು ತಿಳಿಯಲು ಈ ರೀತಿ ಮಾಡಿದ್ದಾರಷ್ಟೇ ಎಂದು ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದ್ದಾರೆ. ಭರತ್ ಶೆಟ್ಟಿಗೆ ಇತರರೂ ಬೆಂಬಲ ನೀಡಿದ್ದಾರೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಕುರುಬ ಸಮುದಾಯಕ್ಕೆ ಮಾತ್ರ ಎಸ್ ಟಿ ಸ್ಥಾನಮಾನ: ಸಿದ್ದರಾಮಯ್ಯ ಮೇಲೆ ನಾಯಕ ಸಮುದಾಯ ಮುನಿಸು