ಲಾಕ್ ಡೌನ್ ನಡುವೆ ಮೀನುಗಾರಿಕೆ ನಡೆಸೋಕೆ ಸರಕಾರ ಅನುಮತಿಯನ್ನೇನೋ ನೀಡಿದೆ. ಆದ್ರೂ ಕರಾವಳಿ ಮೀನು ರಾಜ್ಯದ ಜನರಿಗೆ ತಕ್ಷಣ ಸಿಗೋದು ಡೌಟ್.
ಸರಕಾರ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ನೀಡೊದ್ರ ಮೂಲಕ ಮೀನುಗಾರಿಕೆಗೆ ಪರ್ಮಿಷನ್ ನೀಡಿದೆ. ಹೀಗಾಗಿ ಬಂದರಿಗೆ ತರದಂತೆ ಮೀನುಗಾರರು ಮಾರುಕಟ್ಟೆಯಲ್ಲೇ ಮಾರಾಟ ಮಾಡಬೇಕೆಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲಾಡಳಿತ ಮಾರ್ಗಸೂಚಿಯಂತೆ ಮೀನು ಮನೆಮನೆಗೆ ಪೂರೈಕೆ, ಮಾರಾಟ ಮಾಡಲಾಗುತ್ತದೆ. ಆದರೆ ಆರಂಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಗೆ ಸಾಗಾಟ ಮಾಡೋದಿಲ್ಲ. ಸಮಯ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದಾರೆ.