ಮಂಗಳೂರು: ಕೊರೋನಾವೈರಸ್ ಹರಡದಂತೆ ತಡೆಯಲು ಕರ್ನಾಟಕ ತಲಪಾಡಿಯಲ್ಲಿ ಗಡಿ ಮುಚ್ಚಿದ್ದು, ಕೋರ್ಟ್ ಮಧ‍್ಯಸ್ಥಿಕೆಯಿಂದಾಗಿ ಷರತ್ತಿನ ಮೇರೆಗೆ ಕೇರಳೀಯರಿಗೆ ಗಡಿ ತೆರೆಯಲು ನಿರ್ಧರಿಸಿದೆ.
ಆದರೆ ಕೊರೋನಾ ಸೋಂಕಿತರಾಗಿದ್ದರೆ ಕೇರಳದವರು ಗಡಿ ದಾಟಿ ಮಂಗಳೂರಿಗೆ ಸಾಗಲು ಅವಕಾಶ ನೀಡಲ್ಲ ಎಂದು ಕರ್ನಾಟಕ ಸ್ಪಷ್ಟವಾಗಿ ತಿಳಿಸಿದೆ.
ಹೀಗಾಗಿ ಈಗ ಕೇರಳದಿಂದ ಆಂಬ್ಯುಲೆನ್ಸ್ ಗಳಲ್ಲಿ ಬರುವ ರೋಗಿಗಳು ಕಡ್ಡಾಯವಾಗಿ ಕೊರೋನಾ ರೋಗಿಗಳಲ್ಲ ಎಂಬ ಸರ್ಟಿಫಿಕೇಟ್ ಹಿಡಿದು ಬರಬೇಕು. ಇಲ್ಲದೇ ಹೋದರೆ ಗಡಿ ದಾಟಲು ಕರ್ನಾಟಕ ಅವಕಾಶ ನೀಡುತ್ತಿಲ್ಲ. ಈ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.