Select Your Language

Notifications

webdunia
webdunia
webdunia
webdunia

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಮೈಸೂರು ಅರಮನೆ

Sampriya

ಮೈಸೂರು , ಸೋಮವಾರ, 19 ಮೇ 2025 (22:55 IST)
Photo Credit X
ಮೈಸೂರು: ಸೋಮವಾರದಂದು ತಿರುಮಲ ದೇವಸ್ಥಾನಕ್ಕೆ ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ ಎರಡು ಬೃಹತ್  ದೀಪಗಳನ್ನು ಸೋಮವಾರದಂದು  ದೇಣಿಗೆಯಾಗಿ ನೀಡಿದರು.

ಮೈಸೂರು ರಾಜಮನೆತನದವರು ತಿರುಮಲ ದೇವರನ್ನು ಪೂಜಿಸುತ್ತಾರೆ. ಸುಮಾರು 300 ವರ್ಷಗಳ ಹಿಂದೆ, ಅಂದಿನ ಮೈಸೂರು ಮಹಾರಾಜರು ತಿರುಮಲ ದೇವಸ್ಥಾನಕ್ಕೆ ಬೆಳ್ಳಿ ಅಖಂಡ ದೀಪಗಳನ್ನು ದಾನ ಮಾಡಿದ್ದರು.

ಇದೀಗ ಮೈಸೂರು ರಾಜಮಾತೆ ಪ್ರಮೋದಾ ದೇವಿ ಅವರು ಮೈಸೂರು ಸಂಸ್ಥಾನದ ಪರವಾಗಿ ತಿರುಮಲ ಶ್ರೀಗಳಿಗೆ ಎರಡು ಬೃಹತ್ ಬೆಳ್ಳಿಯ ಅಖಂಡ ದೀಪಗಳನ್ನು ಅರ್ಪಿಸಿದರು.

ಈ ದೇಣಿಗೆಯನ್ನು ರಂಗನಾಯಕಕುಲ ಮಂಟಪದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು, ಹೆಚ್ಚುವರಿ ಇಒ ಸಿ.ಎಚ್. ​​ವೆಂಕಯ್ಯ ಚೌಧರಿ ಮತ್ತು ಟಿಟಿಡಿ ಮಂಡಳಿ ಸದಸ್ಯ ನರೇಶ್ ಅವರಿಗೆ ಅರ್ಪಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ