Publish Date: Sat, 14 Nov 2020 (10:59 IST)
Updated Date: Sat, 14 Nov 2020 (11:00 IST)
ಬೆಂಗಳೂರು: ಈ ಬಾರಿಯ ದೀಪಾವಳಿ ಪ್ರತೀ ಬಾರಿಯಂತೆ ಅಲ್ಲ. ಈಗಾಗಲೇ ರಾಜ್ಯದಲ್ಲಿ ಪಟಾಕಿಗೆ ನಿಷೇಧ ಹೇರಲಾಗಿದ್ದು, ಕೇವಲ ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ.
ಒಂದು ವೇಳೆ ಹಸಿರು ಪಟಾಕಿ ಹೊರತಾದ ಪಟಾಕಿಗಳನ್ನು ಮಾರಿದರೆ ಅಥವಾ ಸಿಡಿಸಿದರೆ ತಕ್ಕ ಕ್ರಮ ಕೈಗೊಳ್ಳಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ಬೇರೆ ಪಟಾಕಿ ಮಾರಾಟ, ಸಿಡಿಸದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಬೇಕಾಗುತ್ತದೆ.