ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. ನಿರ್ಮಿಸಿದ ಹೆಲಿಕಾಪ್ಟರ್ ಮತ್ತು ಡ್ರೋನ್ ಗಳನ್ನು ನಾಳೆ ಪ್ರಧಾನಿ ಮೋದಿ ಸೇನೆಗೆ ಹಸ್ತಾಂತರಿಸಲಿದ್ದಾರೆ.
ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆಯುತ್ತಿರುವ ರಾಷ್ಟ್ರ ರಕ್ಷೆಯ ಸಮರ್ಪಣಾ ಪರ್ವದ ಕೊನೆಯ ದಿನದಂದು ದೇಶಿ ನಿರ್ಮಿತ ಹೆಲಿಕಾಪ್ಟರ್ ಗಳನ್ನು ಭಾರತೀಯ ವಾಯುನೆಲೆಗೆ ಹಸ್ತಾಂತರಿಸಲಿದ್ದಾರೆ. ಇವು ಸಮುದ್ರಮಟ್ಟಕ್ಕಿಂದ 5 ಸಾವಿರ ಅಡಿ ಎತ್ತರಕ್ಕೆ ಹಾರಬಲ್ಲ ಹೆಲಿಕಾಪ್ಟರ್ ಗಳಾಗಿವೆ.
ಈ ವೇಳೆ ಪ್ರಧಾನಿ ಮೋದಿ ಉತ್ತರ ಪ್ರದೇಶದ ರಕ್ಷಣಾ ಉದ್ಯಮ ಕಾರಿಡಾರ್ ವ್ಯಾಪ್ತಿಯಲ್ಲಿ 400 ಕೋಟಿ ರೂ. ಮೌಲ್ಯದ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.