Publish Date: Thu, 16 May 2019 (16:07 IST)
Updated Date: Thu, 16 May 2019 (16:08 IST)
ಜನರ ಪಾಲಿಗೆ ಸಮ್ಮಿಶ್ರ ಸರ್ಕಾರ ಸತ್ತಿದೆ. ಬಿಜೆಪಿ ಸರ್ಕಾರ ಯಾವಾಗ ಆಡಳಿತಕ್ಕೆ ಬರುತ್ತೆ ಅಂತಾ ಜನರು ಕಾಯುತ್ತಿದ್ದಾರೆ. ಹೀಗಂತ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದು, ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಬಿಜೆಪಿ ಗಲ್ಲುತ್ತೆ.
ಇದರ ಪರಿಣಾಮ ರಾಜ್ಯ ರಾಜಕೀಯದ ಮೇಲೆ ಆಗುತ್ತೆ. ರಾಜಕೀಯದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗುತ್ತೆ. ಸರ್ಕಾರದ ಬಗ್ಗೆ ಜೆಡಿಎಸ್ -ಕಾಂಗ್ರೆಸ್ ಶಾಸಕರಿಗೆ ವಿಶ್ವಾಸವಿಲ್ಲ ಎಂದರು.
ಅವರ ಕಚ್ಚಾಟದಿಂದಲೇ ಸರ್ಕಾರ ಪತನವಾಗುತ್ತೆ. ಮೈತ್ರಿ ನಾಯಕರ ಹೇಳಿಕೆ ನೋಡಿದ್ರೆ ಅಸಮಾಧಾನ ಭುಗಿಲೆದ್ದಿರುವುದು ಗೊತ್ತಾಗುತ್ತೆ ಎಂದ್ರು.
ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕ. ಸಿಎಮ್ ಕನಸು ಕಾಣುತ್ತಿರುವುದು ಸಿದ್ದರಾಮಯ್ಯ. ಯಡಿಯೂರಪ್ಪನವರನ್ನು ಅಧಿಕಾರದಿಂದ ದೂರವಿಡಲು ಸಮ್ಮಿಶ್ರ ಸರ್ಕಾರ ಮಾಡಿದ್ದಾರೆ ಎಂದು ಆರೋಪ ಮಾಡಿದ್ರು.