ಹಾಸನ: ವೈದ್ಯ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿ ಕಿರುಕುಳ ನೀಡಿದ ಆರೋಪದಲ್ಲಿ ಹಿಮ್ಸ್ ಆಸ್ಪತ್ರೆಯ ವೈದ್ಯರೊಬ್ಬರನ್ನು ಅಮಾನತು ಮಾಡಲಾಗಿದೆ.
ಜನವರಿ 12 ರಂದು ಘಟನೆ ನಡೆದಿತ್ತು. ಲಿಫ್ಟ್ ನಲ್ಲಿ ಹೋಗುವಾಗ ಏಕಾಏಕಿ ವಿದ್ಯಾರ್ಥಿನಿಯನ್ನು ತಬ್ಬಿಕೊಂಡ ಆರೋಪಿ ವೈದ್ಯ ಆಕೆಗೆ ಚುಂಬಿಸಿದ್ದಾನೆ. ಈ ಸಂಬಂಧ ಎಚ್ ಒಡಿಗೆ ವಿದ್ಯಾರ್ಥಿನಿ ದೂರು ನೀಡಿದ್ದಳು.
ಅದರಂತೆ ಆರೋಪಿ ವೈದ್ಯನನ್ನು ಅಮಾನತು ಮಾಡಲಾಗಿದೆ. ಇದೀಗ ವಿಶೇಷ ತಂಡ ರಚಿಸಿ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.