ಬಿಗ್ ಬಾಸ್ ನ ಸ್ಪರ್ಧಿ ನಿವೇದಿತಾ ಗೌಡ ಚಲಿಸುತ್ತಿದ್ದ ಕಾರ್ ನಲ್ಲಿ ಕೀ ಕೀ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದು ನಿಮಗೆಲ್ಲ ಗೊತ್ತು. ಆದರೆ ಕಾರ್ ನ ಕೀ ಕೀ ಡ್ಯಾನ್ಸ್ ಮೀರಿಸುವಂತೆ ಹಳ್ಳಿ ಹೈದ ಹೊಸ ಡ್ಯಾನ್ಸ್ ಮಾಡಿದ್ದಾರೆ. ಅಂದ್ಹಾಗೆ ಹೊಸ ಡ್ಯಾನ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ನಿವೆಲ್ರೂ ಕೀಕೀ ಡ್ಯಾನ್ಸ್ ನೋಡಿರುತ್ತಿರಾ ಜೊತೆಗೆ ಒಂದಷ್ಟು ಜನ್ರು ಆ ಡ್ಯಾನ್ಸ್‌ಗೆ ಸ್ಟೇಪ್ ಹಾಕಿರುತಿರಾ. ಆದ್ರೆ ಉತ್ತರ ಕರ್ನಾಟಕದ ಹುಡುಗ್ರು ಹೊಸದೊಂದು ಪ್ರಯೋಗ ಮಾಡಿದ್ದಾರೆ. ಕೀಕೀ ಗೆ ಸವಾಲೋಡ್ಡುವ ಹಾಗೆ ಇದೆ ಆದ ಕೀ ಕೀ ಡ್ಯಾನ್ಸ್…
ಚಕ್ಕಡಿ ಕೀಕೀ ಡ್ಯಾನ್ಸ್ ಮಾಡೋ ಮೂಲಕ ನಾವೇನ್ ಕಮ್ಮಿ ಇಲ್ಲ ಎಂಬುದನ್ನ ತೋರಿಸಿದ್ದಾರೆ. ಗದಗ ಜಿಲ್ಲೆ ಶಿರಹಟ್ಟಿಯ ಶಶೀಧರ ಮತ್ತು ದೇವರಾಜ ಎಂಬುವರು. ಚಕ್ಕಡಿ ಡ್ಯಾನ್ಸ್ ಮೂಲಕ ಫೇಮಸ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿರೋ ಈ ವಿಡಿಯೋ ಕೀಕೀ ವರ್ಸಸ್ ಚಕ್ಕಡಿ ಎಂಬ ಖ್ಯಾತಿಗೆ ಒಳಗಾಗಿದೆ. ಎಲ್ಲಿ ನೋಡಿದರೂ ಕೀಕಿ ಡ್ಯಾನ್ಸ್ ಹವಾ. ಹೀಗಿರುವಾಗ ಗದಗ ಜಿಲ್ಲೆಯ ರೈತಾಪಿ ವರ್ಗದ ಮಕ್ಕಳು ನಾವು ಒಂದು ಕೈ ನೋಡಿ ಬಿಡೋಣ ಅಂತ ಜಮೀನು ಕೆಲಸಕ್ಕೆ ಹೋಗುವಾಗ ಚಕ್ಕಡಿ ಡ್ಯಾನ್ಸ್ ಮಾಡಿ ಮಿಂಚುತ್ತಿದ್ದಾರೆ. ದಾರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಚಕ್ಕಡಿಯಿಂದ ಸ್ವಲ್ಪ ದೂರದಲ್ಲಿ ನಿಂತು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.