Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುಂಡ ಪೋಕರಿಗಳ ಮಾತಿಗೆ ಮಣೆ ಹಾಕಿದ್ರಾ ಶಾಸಕ ಮಾಡಿದ ಕೆಲಸವೇನು ಗೊತ್ತಾ?

ಪುಂಡ ಪೋಕರಿಗಳ ಮಾತಿಗೆ ಮಣೆ ಹಾಕಿದ್ರಾ ಶಾಸಕ ಮಾಡಿದ ಕೆಲಸವೇನು ಗೊತ್ತಾ?
ಮಂಡ್ಯ , ಸೋಮವಾರ, 13 ಆಗಸ್ಟ್ 2018 (15:19 IST)
ರಾಜಕೀಯ ಒತ್ತಡಕ್ಕೆ ಮಣಿದು ಪುಂಡ ಪೋಕರಿಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ನಿಯಮ ಉಲ್ಲಂಘಿಸಿ ಬಾಲಕಿಯರ ಸರ್ಕಾರಿ ಕಾಲೇಜು ಕಾಂಪೌಂಡ್ ಅನ್ನು ನಿಗದಿಗಿಂತ ಕಡಿಮೆ ಎತ್ತರ ನಿರ್ಮಿಸಿರೋ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಕಾಂಪೌಂಡ್ ನಿರ್ಮಾಣದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೆದ್ದಾರಿ ಅಗಲೀಕರಣದ ವೇಳೆ ಕಾಲೇಜಿನ ಹಳೆಯ ಕಾಂಪೌಂಡ್ ಒಡೆಯಲಾಗಿತ್ತು. ಕೆಶಿಪ್ ನಿಯಮದಂತೆ ಇದೀಗ ಮತ್ತೆ ಕಾಲೇಜಿಗೆ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದ್ದು, ಆದ್ರೆ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ವಾಹನಗಳ ಶಬ್ದ ನಿಯಂತ್ರಣ ದೃಷ್ಟಿಯಿಂದ 8 ಅಡಿ ಕಾಂಪೌಂಡ್ ನಿರ್ಮಣ ಮಾಡಬೇಕೆಂಬ ನಿಯಮವಿದ್ರೂ, ರಾಜಕಾರಣಿಗಳ ಒತ್ತಡಕ್ಕೆ ಮಣಿದಿರುವ ಗುತ್ತಿಗೆದಾರ ಚೆನ್ನಕೇಶವ ಎಂಬುವರು, 4 ಅಡಿ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ.

8 ಅಡಿ ಕಾಂಪೌಂಡ್ ನಿರ್ಮಾಣ ಮಾಡಿದ್ರೆ ಕಾಲೇಜಿನಲ್ಲಿ ನಡೆಯುವ ಚಟುವಟಿಗಳನ್ನ ನೋಡಲು ಸಾಧ್ಯವಿಲ್ಲ. ಜೊತೆಗೆ ಕಾಲೇಜು ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಕೆಲವು ಪುಂಡ ಪೋಕರಿಗಳು ಮಳವಳ್ಳಿ ಶಾಸಕ ಕೆ.ಅನ್ನದಾನಿ ಅವ್ರ ಮೇಲೆ ಒತ್ತಡ ತಂದು ಅವ್ರ ಮೂಲಕ ಗುತ್ತಿಗೆದಾರರಿಗೆ ಹೇಳಿಸಿ 8 ಅಡಿ ಕಾಂಪೌಂಡ್ ಬದಲು 4 ಅಂಡಿ ಕಾಂಪೌಂಡ್ ನಿರ್ಮಾಣವಾಗುವಂತೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಆದ್ರೆ ಗುತ್ತಿಗೆದಾರ ಚೆನ್ನಕೇಶವ ಮಾತ್ರ, ಸ್ಥಳೀಯ ಕೆಲವರು ಎಂಟು ಅಡಿ ಕಾಂಪೌಂಡ್ ನಿರ್ಮಾಣ ಮಾಡೋದು ಬೇಡ ಎಂದು ವಿರೋಧಿಸಿದ್ರಿಂದ ಕಾಂಪೌಂಡ್ ಎತ್ತರ ಇಳಿಸಲಾಗಿದೆ. ಶಾಸಕರು ಹೇಳಿದ್ರೆ ನಿಯಮದಂತೆ ಕಾಂಪೌಂಡ್ ನಿರ್ಮಿಸ್ತೀವಿ ಅಂತಾರೆ. ಇನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಸುರಕ್ಷತೆ ದೃಷ್ಟಿ ಹಾಗೂ ಪಾಠ, ಪ್ರವಚನಕ್ಕೆ ಅನುಕೂಲಕ್ಕಾಗಿ 8 ಅಂಡಿ ಕಾಂಪೌಂಡನ್ನೇ ನಿರ್ಮಿಸಬೇಕು ಹಾಗೂ ಹೆದ್ದಾರಿ ಕಡೆ ಗೇಟ್ ತೆರೆಯ ಬಾರದು ಅಂತ ಒತ್ತಾಯ ಮಾಡ್ತಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಎಂ ವಾಸ್ತವ್ಯ