Publish Date: Fri, 05 Oct 2018 (17:52 IST)
Updated Date: Fri, 05 Oct 2018 (17:54 IST)
ವಿಧಾನ ಪರಿಷತ್ ಮಾಜಿ ಸದಸ್ಯರೊಬ್ಬರ ಮನೆಯಲ್ಲಿ ಏಕಾಏಕಿಯಾಗಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸುತ್ತಲಿನ ಜನರು ಕೆಲಕಾಲ ಭೀತಿಗೊಳಗಾಗಿದ್ದರು.
ಕಲಬುರಗಿಯಲ್ಲಿರುವ ಕಾಂಗ್ರೆಸ್ ನ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ರ ನಿವಾಸದಲ್ಲಿ ಫ್ರೀಡ್ಜ್ ಸ್ಫೋಟಗೊಂಡಿದೆ. ಕಲಬುರ್ಗಿಯ ಶಾಂತಿನಗರದಲ್ಲಿರುವ ನಿವಾಸದಲ್ಲಿ ಘಟನೆ ಸಂಭವಿಸಿದೆ.
ಫ್ರೀಡ್ಜ್ ಬ್ಲಾಸ್ಟ್‌ನಿಂದಾಗಿ ಬೆಡ್‌ರೂಂಗೂ ಬೆಂಕಿ ಆವರಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್ ಶಾಟ್೯ ಸಕ್ಯೂಟ್‌ನಿಂದ ಫ್ರೀಡ್ಜ್ ಬ್ಲಾಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.