ಯಾವುದೇ ಕಾಲದಲ್ಲಿ ಬದಲಾವಣೆ ಒಂದೇ ಬದಿಯಿಂದ ಅಗಬಾರದು. ನಮ್ಮ ಗುರುಗಳು ಮುಸ್ಲಿಮರನ್ನು ಮಠಕ್ಕೆ ಕರೆದು ಸ್ವಾಗತ ಮಾಡಿದ್ದರು. ಆದರೆ ಯಾವುದೇ ಮಸೀದಿಗೆ ಯಾವ ಮಠಾಧೀಶರನ್ನು ಕರೆದು ಒಂದು ಸತ್ಯನಾರಾಯಣ ಪೂಜೆಯೋ, ಇನ್ನೊಂದು ಎಲ್ಲೂ ನಡೆದೇ ಇಲ್ಲ. ಹೀಗೆ ಯಾಕೆ ಒಂದೇ ಬದಿಯಲ್ಲಿ ಇನ್ನೂ ತಗ್ಗಬೇಕು, ಇನ್ನೂ ಬಗ್ಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು. ಇನ್ನೊಂದು ಬದಿಯಿಂದ ನಾವು ಮಾತ್ರ ಉತ್ಸವಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಾ ಹೋಗುತ್ತೇವೆ. ಇದು ಯಾವ ತರನಾದ ನ್ಯಾಯ ಎನ್ನುವುದು ತಿಳಿಯುತ್ತಿಲ್ಲ. ಎಲ್ಲರೂ ಸಮಾಜದಲ್ಲಿ ಶಾಂತಿ- ಸೌಹಾರ್ದತೆ ಬಯಸುವವರು. ಆದರೆ ಒಂದು ಬದಿಯಿಂದ ಇಂತಹ ಆಘಾತ, ಹೊಡೆತ. ಇನ್ನೊಂದು ಕಡೆಯಿಂದ ಸದಾಕಾಲ ತಗ್ಗಿ-ಬಗ್ಗಿ ನಡೆಯಬೇಕೆಂದು ಆಶಿಸುವುದು. ಇದು ಎಷ್ಟರ ಮಟ್ಟಿನ ನ್ಯಾಯ ಎಂದು ಪ್ರಶ್ನಿಸಿದರು.