Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಂಜಾನ್ ಉಪವಾಸ ಆಚರಣೆಯ ವಿಶೇಷತೆ ಏನು?

ರಂಜಾನ್ ಉಪವಾಸ ಆಚರಣೆಯ ವಿಶೇಷತೆ ಏನು?
ನವದೆಹಲಿ , ಭಾನುವಾರ, 3 ಏಪ್ರಿಲ್ 2022 (15:30 IST)
ಈ ಮಾಸದಲ್ಲಿ ಮುಸ್ಲಿಮರು 30 ದಿನ ಉಪವಾಸ ಆಚರಿಸುವ ಜೊತೆಗೆ ದಾನ-ಧರ್ಮ, ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ.

ಇಸ್ಲಾಮಿನ ತರಾವೀಹ್, ನಮಾಜ್, ಉಪವಾಸ, ಝಕಾತ್ (ದಾನ), ಹಜ್ ಎಂಬ ಪಂಚಕರ್ಮಗಳನ್ನು ನೇರವೇರಿಸುವ ರಂಜಾನ್ ಪುಣ್ಯ ಸಂಪಾದಿಸುವ ಮಾಸವೂ ಎನಿಸಿಕೊಂಡಿದೆ.

ಈ ಸಮಯದಲ್ಲಿ ಆತ್ಮನಿಯಂತ್ರಣದ ಜತೆಗೆ ಸಂಯಮ ರೂಢಿಸಿಕೊಳ್ಳುವುದನ್ನು ಕಲಿಯುತ್ತಾರೆ. ಬಡವರ ಹಸಿವು ಅರಿಯುವ ಜೊತೆಗೆ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವವರ ಜೀವನ ಹೇಗಿರಬಹುದು? ಎಂಬ ಪಾಠವನ್ನೂ ಉಪವಾಸ ಕಲಿಸುತ್ತದೆ.

ಅಲ್ಲದೆ ರಾತ್ರಿ ವೇಳೆ ನಡೆಯುವ ವಿಶೇಷ ತರಾವೀಹ್ ನಮಾಜ್ಗಳಲ್ಲಿ ಪವಿತ್ರ ಕುರಾನ್ ಪಠಿಸಲಾಗುತ್ತದೆ. ಕುರಾನ್ನನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡಿರುವವರು ಈ ನಮಾಜ್ಗೆ ನೇತೃತ್ವ ವಹಿಸುತ್ತಾರೆ. 

ಮನುಷ್ಯನನ್ನು ಅನ್ಯಚಿತ್ತದೆಡೆಗೆ ಕೊಂಡೊಯ್ಯುವ ಮಾರ್ಗವನ್ನು ಮುಚ್ಚಿ, ಒಳಿತಿನ ಬಗ್ಗೆ ಮಾತ್ರ ಚಿಂತಿಸುವಂತೆ ಮಾಡುವುದು ರಂಜಾನ್ ಮಾಸದ ವಿಶೇಷ.

ಹಾಗಾಗಿಯೇ ಈ ಮಾಸದಲ್ಲಿ ಅಲ್ಲಾನ ಪ್ರೀತಿಗಳಿಸುವ ಇಚ್ಛೆಯೊಂದಿಗೆ ಆಹಾರ, ಮದ್ಯ ಸೇವನೆಯನ್ನೂ ತ್ಯಜಿಸುತ್ತಾರೆ. ಕಾಮಾಸಕ್ತಿ, ಮನರಂಜನೆಯಿಂದ ದೂರವಿದ್ದು, ದುಡಿಮೆ ನಂಬಿ ಬದುಕುತ್ತಾರೆ. 

ಈ ಮಾಹೆಯಲ್ಲಿ ದಾನ-ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಲಭಿಸುತ್ತದೆ. ಶ್ರೀಮಂತರು ಮತ್ತು ಉಳ್ಳವರು ತಮ್ಮ ಸಂಪತ್ತಿನ ಶೇ 2.5 ಪಾಲನ್ನು ಝಕಾತ್ (ದಾನ) ರೂಪದಲ್ಲಿ ಬಡವರಿಗೆ ನೀಡುವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ.

ಉಪವಾಸವೂ ಸಹ್ರಿಯಿಂದ ಆರಂಭವಾಗಿ ಇಫ್ತಾರ್ನೊಂದಿಗೆ ಕೊನೆಗೊಳ್ಳುತ್ತದೆ. ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ ಮುನ್ನ ಸೇವಿಸುವ ಆಹಾರಕ್ಕೆ ಸಹ್ರಿ ಎನ್ನುವರು.

ಮನೆಗಳಲ್ಲಿ ಇಫ್ತಾರ್ಗೆ ಖರ್ಜೂರ, ಹಣ್ಣುಗಳು ಮತ್ತು ಹಣ್ಣಿನ ರಸ ಸೇರಿದಂತೆ ವಿವಿಧ ರೀತಿಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಮಸೀದಿಗಳಲ್ಲೂ ಸಾಮೂಹಿಕ ಇಫ್ತಾರ್ ಆಯೋಜನೆ ನಡೆಯುತ್ತದೆ. ಇದರೊಂದಿಗೆ ಈ ಮಾಹೆಯಲ್ಲಿ ಅಲ್ಲಲ್ಲಿ ಸೌಹಾರ್ದ ಇಫ್ತಾರ್ ಕೂಟಗಳೂ ನಡೆಯುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶಸ್ಸಿನ ಸೂತ್ರಗಳನ್ನು ತಿಳಿಸಿದ ಆನಂದ್ ಮಹೀಂದ್ರಾ