ಹುಡುಗಿಯರ ಸ್ನೇಹ ಮಾಡಲು ಹುಡುಗರು ಎಂತೆಂಥಾ ಸಾಹಸ ಮಾಡ್ತಾರೆ. ಒಳ್ಳೆಯ ದಾರಿಯನ್ನು ಕೆಲವರು ಆರಿಸಿಕೊಂಡರೆ ಮತ್ತೆ ಕೆಲವರು ಮಾಡಬಾರದ್ದನ್ನು ಮಾಡ್ತಾರೆ.
ಆ ಯುವತಿ ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡ್ತಾಳೆ. ಅವಳ ಫೋನ್ ನಂಬರ್ ನ್ನ ಅದು ಹೇಗೋ ಪಡೆದಿದ್ದ ಭೂಪನೊಬ್ಬ ಅವಳಿಗೆ ಫೋನ್ ಕರೆ ಮಾಡ್ತಾ ಗಂಟು ಬಿದ್ದಿದ್ದಾನೆ.
ಬೇರೆ ಬೇರೆ ನಂಬರ್ ಗಳಿಂದ ಫೋನ್ ಮಾಡಿ ಪೀಡಿಸಲಾರಂಭಿಸಿದ್ದಾನೆ. ಆದರೆ ಆ ಯುವಕನಿಗೆ ಯುವತಿ ಸ್ಪಂದನೆ ನೀಡಿಲ್ಲ.
ಕೊನೆಗೆ ಯುವತಿಯ ನಡೆಯಿಂದ ಬೇಸತ್ತ ಭೂಪ ಆಕೆಯ ಮೊಬೈಲ್ ಗೆ ನೀಲಿ ಚಿತ್ರಗಳ ವಿಡಿಯೋಗಳನ್ನು ಕಳಿಸಿದ್ದಾನೆ.
ಅಪರಿಚಿತನ ಕಿರುಕುಳದಿಂದ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಂದ್ಹಾಗೆ ಈ ಘಟನೆ ನಡೆದದ್ದು ಹರಿಯಾಣದ ಗುರುಗ್ರಾಮದಲ್ಲಿ.