Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಲ್ಲದ ಕ್ರೈಂ : ಬೆಚ್ಚಿಬಿದ್ದ ಮಹಾನಗರ - ತಡರಾತ್ರಿ ಅಲ್ಲಿ ಆಗಿದ್ದೇನು?

ನಿಲ್ಲದ ಕ್ರೈಂ : ಬೆಚ್ಚಿಬಿದ್ದ ಮಹಾನಗರ - ತಡರಾತ್ರಿ ಅಲ್ಲಿ ಆಗಿದ್ದೇನು?
ಧಾರವಾಡ , ಸೋಮವಾರ, 30 ಸೆಪ್ಟಂಬರ್ 2019 (17:03 IST)
ಧಾರವಾಡ ಶೂಟೌಟ್ ಪ್ರಕರಣ ‌ಮಾಸುವ ಬೆನ್ನಲ್ಲೇ  ತಡರಾತ್ರಿ ಮತ್ತೊಂದು ಚಾಕು ಇರಿತಕ್ಕೆ ಯುವಕನೋರ್ವ  ಅಸುನೀಗಿದ್ದು ಮಹಾನಗರದ ಜನತೆ ಮತ್ತೆ ಬೆಚ್ಚಿಬೀಳುಸುವಂತೆ ಮಾಡಿದೆ.

ಧಾರವಾಡದ ಮಣಕಿಲ್ಲಾ ನಿವಾಸಿ ಮಹ್ಮದ್ ಜುಬೇರ  ತಂದೆ ಜಾಫರ್  ಮಕಾನದಾರ (18)  ಎಂಬಾತನೇ ದುಷ್ಕರ್ಮಿಗಳ ಚಾಕು ಇರಿತಕ್ಕೆ ಅಸುನೀಗಿದ ಯುವಕನಾಗಿದ್ದಾನೆ.

ತಡರಾತ್ರಿ ನಗರದ ನಿಜಾಮುದ್ದೀನ್  ಕಾಲನಿ ಬಳಿ ಮೂವರು ಕ್ಷುಲ್ಲಕ ಕಾರಣಕ್ಕೆ  ಚಾಕು ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು,  ಸ್ಥಳದಲ್ಲಿಯೇ  ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ  ಜುಬೇರನನ್ನು   ತಕ್ಷಣವೇ ಸಮೀಪದ  ಧಾರವಾಡ ಜಿಲ್ಲಾ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜುಬೇರ ಸಾವನ್ನಪ್ಪಿದ್ದಾನೆ. 

ಈ ಕುರಿತು  ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಲೆಗೆ ಪೊಲೀಸರು ಬಲೆ ಬೀಸಿದ್ದಾರೆ.
 ಹುಬ್ಬಳ್ಳಿ-ಧಾರವಾಡ ಅವಳಿನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ  ಗಣೇಶ ಚತುರ್ಥಿಯಿಂದ  8 ಚಾಕು  ಇರಿತ ಪ್ರಕರಣಗಳಲ್ಲಿ ನಾಲ್ವರು,   ಶೂಟೌಟ್ ನಿಂದ   ಇಬ್ಬರು ಸಾವನ್ನಪ್ಪಿದ್ದಾರೆ.     ಅಪರಾಧಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು,  ಜನರು ಪ್ರಾಣಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

 ಹುಬ್ಬಳ್ಳಿ-ಧಾರವಾಡ ಪೊಲೀಸರು  ದಿನನಿತ್ಯ ರೌಡಿಗಳ ಮನೆ ಮೇಲೆ ದಾಳಿ ನಡೆಸುತ್ತಿದ್ದು,  ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರಲ್ಲದೆ  ಪ್ರಕರಣ ದಾಖಲಿಸಿ  ಬಿಸಿ ತಾಕಿಸಿ ಎಚ್ಚರಿಸಿದ್ದಾರೆ. ಅಪರಾಧಗಳ ಸಂಖ್ಯೆ ಹೆಚ್ಚುತ್ತಲಿದ್ದು  ಪೊಲೀಸರು  ನಿದ್ದೆಗೆಡಿಸುವಂತೆ ಮಾಡಿದ್ದು, ಪ್ರಕರಣಗಳ ಕಡಿವಾಣ ಸವಾಲಿನ ಸಾಹಸವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಿಯು ವಿದ್ಯಾರ್ಥಿನಿಯನ್ನು ಹುರಿದು ಮುಕ್ಕಿದ ಕಾಮುಕರು