Webdunia - Bharat's app for daily news and videos

Install App

ಜನಪ್ರತಿನಿಧಿಗಳು ದುಬಾರಿ ವಸ್ತುಗಳನ್ನ ಬಳಕೆ ಮಾಡ್ಲೇ ಬಾರ್ದಾ…?

geetha
ಗುರುವಾರ, 7 ಮಾರ್ಚ್ 2024 (15:20 IST)
ಬೆಂಗಳೂರು-ಪೊಲಿಟಿಕಲ್  ಲೀಡರ್ಸ್….!ಒನ್ಸ್ ಅಪ್ ಆನ್ ಏ ಟೈಮ್ ಇವರ ಡ್ರಸ್ ಕೋಡ್ ಹೇಗಿತ್ತು. ಈಗ ಹೇಗಾಗಿದೆ. ಅದರಲ್ಲೂ ಈಗ ಇವರು ತೊಡುವ ದಿರಿಸುಗಳನ್ನ ನೋಡ್ತಾ ಇದ್ರೆ, ಇದೆಲ್ಲ ಸಾಮಾನ್ಯವೇ ಬಿಡಿ ಅನ್ನೋ ಆಗೇ ಆಗೋಗಿದೆ. ಇವತ್ತು ರಾಜಕೀಯ ನೇತಾರರ ನಡಾವಳಿಗಳು ಬದಲಾಗ್ತಿವೆ. ಆಡಳಿತದ ವೈಖರಿಗಳು ಬೇರೆಯದ್ದೇ ರೂಪವನ್ನು ಪಡೆದುಕೊಳ್ತಾ ಇವೆ. ರಾಜಕಾರಣ ಅನ್ನೋದು ಇವತ್ತು ಬೇರೆ ಆಯಾಮವನ್ನು ಪಡೆದುಕೊಂಡು ಬಿಟ್ಟಿದೆ. ಅದರಲ್ಲೂ ಜನಪ್ರತಿನಿದಿಗಳು ಅಂತ ಕರೆಸಿಕೊಳ್ಳುವವರ ರೀತಿ ರಿವಾಜುಗಳು ಮೊದಲಿನಂತೆ ಕಾಣ್ತಿಲ್ಲ. ಎಲ್ಲವೂ ಬದಲಾಗಿದೆ. ಬದಲಾಗ್ತಿದೆ.
 
ರಾಜಕಾರಣ ಯಾವತ್ತು ನಿಂತ ನೀರಲ್ಲ. ಅದು ನಿತ್ಯ ನಿರಂತರವಾಗಿ ಸಾಗುವ ಸಾಗರದಂತೆ. ಅದೇ ರೀತಿಯಾಗಿ ಪ್ರಸಕ್ತ ದಿನಮಾನದಲ್ಲಿ ರಾಜಕೀಯ ಪಕ್ಷಗಳ ಹಲವು ನಾಯಕರುಗಳ ಹಾವಭಾವ, ದಿನಚರಿ, ಮುಖ್ಯವಾಗಿ ಅದರಲ್ಲೂ ಅವರು ಹಾಕಿಕೊಳ್ಳುವ ದುಬಾರಿ ದಿರಿಸಿಗಳು, ಹಾಗೆನೆ ಬೆಲೆಬಾಳುವ ವಸ್ತುಗಳು ಇವತ್ತಿನ ಮಟ್ಟಿಗೆ ದೊಡ್ಡಮಟ್ಟದಲ್ಲಿ ಜೋರಾಗಿಯೇ ಸದ್ದು ಮಾಡ್ತಿವೆ. ಒಂದಾನೊAದು ಕಾಲದಲ್ಲಿ ಬರೀ ಖಾದಿಯನ್ನೇ ಹಾಕ್ತಿದ್ದ ರಾಜಕೀಯ ನಾಯಕರುಗಳು ಇವತ್ತು ತಮ್ಮ ವರಸೆಯನ್ನೇ ಬದಲಾಯಿಸುಕೊಂಡು ಬಿಟ್ಟಿದ್ದಾರೆ. ದುಬಾರಿ ಉಡುಪುಗಳನ್ನ ತೊಟ್ಟು ಮಿರ ಮಿರ ಮಿಂಚ್ತಾ ಇದಾರೆ ನಮ್ಮನ್ನಾಳುವ ಜನನಾಯಕರುಗಳು..!
 
ರಾಜಕೀಯ ಪಕ್ಷಗಳ ಹಲವು ನಾಯಕರು ಸಾಮಾನ್ಯವಾಗಿ ಖಾದಿ ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಹಲವು ನಾಯಕರಿಗೆ ದುಬಾರಿ ವಸ್ತುಗಳನ್ನು ಬಳಸುವ ಅಭ್ಯಾಸ ಇದೆ. ದುಬಾರಿ ವಸ್ತುಗಳ ಬಳಕೆಯು ಹಲವು ಬಾರಿ ವಿವಾದದ ಸ್ವರೂಪವನ್ನೂ ಪಡೆದುಕೊಂಡದ್ದಿದೆ.
 
ಖಾದಿ ಜಮಾನ ಇವತ್ತು ಭಾಗಶಃ ಮುಗಿದೇ ಹೋಗಿದೆ. ಯಾಕಂದ್ರೆ ಇವತ್ತಿನ ಮಟ್ಟಿಗೆ ರಾಜಕಾರಣದ ಸಿದ್ದಾಂತಗಳೆ ಮರೆಯಾಗ್ತಿವೆ. ಹೀಗಿರುವಾಗ ಜನಪ್ರತಿನಿಧಿಗಳು ಇನ್ನೇನು ಮಾಡ್ತಾರೆ ಹೇಳಿ. ಎಲ್ಲೋ ಅಪರೂಪ ಎನ್ನುವಂತೆ ಖಾದಿಯನ್ನು ಹಾಕಿಕೊಂಡು ಜನಸೇವೆ ಮಾಡುವರು ಸಿಕ್ತಾರೆ, ಹೊರತು, ಇನ್ನೂ ಮಿಕ್ಕ ಬಹುತೇಕ ರಾಜಕಾರಣಿಗಳು ಇವತ್ತು ದುಬಾರಿ ಬಟ್ಟೆ, ಮತ್ತು ಕಾಸ್ಟ್ಲೀ ವಸ್ತುಗಳನ್ನು ಹಾಕಿಕೊಂಡು, ಇದುವೇ ಪ್ರತಿಷ್ಠೆ, ಇದೆನೇ ಗೌರವ, ಹಾಗೆ ಹೀಗೆ ಅನ್ನೊ ರೀತಿಯಲ್ಲಿ ದರ್ಬಾರ್ ನಡೆಸ್ತಾ ಇರೋದು ಗುಟ್ಟಾಗೇನು ಉಳಿದಿಲ್ಲ. ದೇಶದ ಹಲವು ರಾಜಕೀಯ ನಾಯಕರುಗಳು ದುಬಾರಿ ಬಟ್ಟೆ, ವಾಚ್, ಜಾಕೆಟ್, ಟೀಶರ್ಟ್, ಹೀಗೆ ಒಂದಲ್ಲ ಎರಡಲ್ಲ, ಬಗೆ ಬಗೆಯ ವಿನ್ಯಾಸದ ವಸ್ತುಗಳನ್ನು ಹಾಕಿಕೊಂಡು ಓಡಾಡೋದು ಸಾಮಾನ್ಯವಾಗಿ ಬಿಟ್ಟಿದೆ.
 
ಇದು ದುಬಾರಿ ದುನಿಯಾ, ಇಲ್ಲಿ ಕಾಸಿದ್ದೋನೇ ಬಾಸು. ಹೌದು ಇವತ್ತಿನ ಜಮಾನವೇ ಹಾಗಾಗಿ ಬಿಟ್ಟಿದೆ. ಹಾಗಾಂತ ಜನಪ್ರತಿನಿಧಿಗಳು ಬರೀ ಖಾದಿಯನ್ನೆ ಹಾಕಿಕೊಂಡು ಓಡಾಬೇಕಾ ಅಂದ್ರೆ, ಬೇಡ ಅಥವಾ ಬೇಕು ಅನ್ನೋದು ಅದು ನಂತರದ ಪ್ರಶ್ನೆ. ಯಾಕಂದ್ರೆ ಜನರನ್ನು ಆಳುವವರು ಖಾಸಗಿಯಾಗಿ ಅದೆನೇ ದರ್ಬಾರ್ ನಡೆಸಿದ್ರೂ, ಅವರದ್ದೇ ಸ್ವಂತ ಹಣದಲ್ಲಿ ಏನು ಮಾಡಿದ್ರು ಖಂಡಿತವಾಗಿಯೂ ತಪ್ಪಾಗಲ್ಲ. ಆದ್ರೆ ಅದನ್ನು ಮೀರಿ ಸರ್ಕಾರದ ಅಥವಾ ಜನರ ದುಡ್ಡಲ್ಲಿ ಹೀಗೆಲ್ಲಾ ದುಬಾರಿ ದಿರಿಸಿ, ಕೋಟ್ಯಾಂತರ ಬೆಲೆಬಾಳುವಂತಹ ವಸ್ತುಗಳನ್ನು ಹಾಕಿಕೊಂಡು ದರ್ಬಾರ್ ಮಾಡೊದನ್ನ ಸಂವಿಧಾನವೇ ಒಪ್ಪಲ್ಲ. ಹಾಗೇ ಮಾಡಲು ಬಾರದು.!
 
ಹಾಗಾಂತ ಇವತ್ತು ದೇಶದ ಎಲ್ಲಾ ರಾಜಕೀಯ ನಾಯಕರುಗಳು, ಜನರ ಹಣದಲ್ಲಿ ಖಾಸಗಿಯಾಗಿ ವಿಲಾಸಿ, ದರ್ಬಾರ್ ನಡೆಸ್ತಾರೆ ಅಂತಲ್ಲ. ಪ್ರಸ್ತುತವಾಗಿ ಇವತ್ತಿನ ಕಾಲಘಟ್ಟದ ರಾಜಕೀಯ ನಾಯಕರುಗಳು ಕಾಸ್ಟ್ಲೀ ಜೀವನಶೈಲಿಯನ್ನ ರೂಡಿಸಿಕೊಂಡು ಬಿಟ್ಟಿದ್ದಾರೆ.! ಹೀಗೆ ಪೊಲಿಟಿಕಲ್ ಲೀಡರ್ಸ್ ದಿನನಿತ್ಯ ಬಳಕೆ ಮಾಡುವ ಹಲವು ಬಗೆಯ ದುಬಾರಿ ವಸ್ತುಗಳ ಬಗ್ಗೆ ಹೇಳ್ತಾ ಹೋದರೆ ಅದರ ಕಥೆಯೇ ಮುಗಿಯೋದಿಲ್ಲ..!
 
ಮೋದಿಯೇ ಧರಿಸಿದ್ರು ದುಬಾರಿ ಬೆಲೆ ಬಾಳುವ ಸೂಟು
 
ಪ್ರಧಾನಿ ಮೋದಿ.! ಇವರು ಏನೇ ಬಳಕೆ ಮಾಡಿದ್ರು, ಅದೆಂಥದ್ದೇ ಉಡುಪ್ಪನ್ನ ಧರಿಸಿದ್ರೂ ಅದು ಸದ್ದು ಮಾಡಿಯೇ ಬಿಡುತ್ತೆ. ಹಾಗೆನೆ ಅದು ಚರ್ಚೆಯ ವಿಷಯವು ಆಗಿ ಬಿಡತ್ತೇ.! ಈ ಹಿಂದೆ ಮೋದಿಯವರು ಧರಿಸಿದ್ದ ಸೂಟ್ ಮತ್ತು ಕನ್ನಡಕವೂ ದೇಶದಲ್ಲಿ ಸುದ್ದಿ ಮಾಡಿ ಸದ್ದು ಮಾಡಿದ್ದು, ಬರೀ ಗುಟ್ಟಾಗೇನು ಉಳಿದಿಲ್ಲ ಬಿಡಿ..! ಅದರಲ್ಲೂ ಪ್ರತಿಪಕ್ಷಗಳಿಗೆ ಇದೇ ಉಡುಪಿನ ವಿಚಾರವೇ ಆಹಾರವಾಗಿ ಹೋಗಿತ್ತು.
 
ಅದು ೨೦೧೫ರ ಇಸವಿ. ಮೋದಿ ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಬರೀ ಒಂದು ವರ್ಷವಷ್ಠೆ ಆಗಿತ್ತು. ಇದೇ ಸಂದರ್ಭದಲ್ಲಿ ಅಮೆರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ವಿಸಿಟ್ ಮಾಡಿದ್ದರು. ಒಬಾಮ ರ‍್ತಾರೆ ಅನ್ನೋ ಕಾರಣಕ್ಕೇನೋ ಗೊತ್ತಿಲ್ಲ, ಸ್ವತಃ ಮೋದಿಯೇ ದುಬಾರಿ ವೆಚ್ಚದ ಸೂಟ್‌ನ್ನು ಹಾಕಿಕೊಂಡಿದ್ರು. ಆ ಸಂದರ್ಭದಲ್ಲಿ ಮೋದಿ ಧರಿಸಿದ್ದ ದುಬಾರಿ ಬೆಲೆ ಬಾಳುವ ಆ ಸೂಟ್ ಬಾರಿ ವಿವಾದಕ್ಕೆ ಕಾರಣವಾಗಿತ್ತು. ಅದೇ ರೀತಿಯಾಗಿ ರಾಹುಲ್ ಗಾಂಧಿ ಕೂಡ ದುಬಾರಿ ಬೆಲೆಯ ಟೀ-ಶರ್ಟ್ ಧರಿಸಿ ಸುದ್ದಿ ಆಗಿದ್ರು… ಮತ್ತೊಂದು ಕಡೆ ಸಿದ್ದರಾಮಯ್ಯ ಕೂಡ ಬೆಳೆಬಾಳುವ ವಾಚ್ ಬಳಸಿ ವಿವಾದಕ್ಕೆ ಸಿಲುಕಿದ್ದು ಇದೆ. ಹೀಗೆ ಇನ್ನೂ ಹಲವು ರಾಜಕೀಯ ನಾಯಕರು ದುಬಾರಿ ವಸ್ತುಗಳ ಬಳಕೆಯಿಂದಲೇ ಹೆಚ್ಚು ಸದ್ದು ಮಾಡಿದ್ದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments