ಬೆಂಗಳೂರು-ಇಂದಿನಿಂದ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.ಶೀಘ್ರವೇ ನಮ್ಮ ಮೆಟ್ರೋದ ಚಾಲಕ ರಹಿತ ಟ್ರೈನ್ ರಸ್ತೆಗೆ ಇಳಿಯಲಿದೆ.R.V.ರಸ್ತೆಯಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ.ವರೆಗೂ ರೈಲು ಚಲಿಸಲಿದೆ.
ಹಳದಿ ಮಾರ್ಗದಲ್ಲಿ ಚಾಲಕ ರಹಿತ ಟ್ರೈನ್ ಚಲಿಸಲಿದ್ದು,ಸದ್ಯ ಚಾಲಕ ರಹಿತ ಮೆಟ್ರೋ ರೈಲು ಹೆಬ್ಬಗೋಡಿ ಡಿಪೋದಲ್ಲಿದೆ.ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದೆ.ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿ ಅನುಮೋದನೆ ನೀಡಲಿದೆ.
ಮೈಸೂರು ರಸ್ತೆಯ ಚಲ್ಲಘಟ್ಟದಿಂದ ಬಿಡದಿ ತನಕ 15 ಕಿಲೋ ಮೀಟರ್ ವಿಸ್ತರಣೆಗೆ ಪ್ಲಾನ್ ಇದೆ.ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ತನಕ 24 ಕಿಲೋ ಮೀಟರ್,ಬೊಮ್ಮಸಂದ್ರದಿಂದ ಅತ್ತಿಬೆಲೆಗೆ 11 ಕಿಲೋ ಮೀಟರ್ ಮೆಟ್ರೋ ರೈಲು ಸೇವೆ ಕಲ್ಪಿಸಲು ಅಧ್ಯಯನ ಮಾಡಿದ್ದು,ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ ತನಕ 32.15 ಕಿಲೋ ಮೀಟರ್,ಸರ್ಜಾಪುರದಿಂದ ಹೆಬ್ಬಾಳ ತನಕ 37 ಕಿಲೋ ಮೀಟರ್, ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆಗೆ 12.5 ಕಿಲೋ ಮೀಟರ್, ಕಾಳೇನ ಅಗ್ರಹಾರದಿಂದ ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು ಮಾರ್ಗವಾಗಿ ಕಾಡುಗೋಡಿ ಟ್ರೀ ಪಾರ್ಕ್‌ವರೆಗೆ 68 ಕಿಲೋಮೀಟರ್ ರೈಲು ಮಾರ್ಗ ನಿರ್ಮಿಸಲು ಕಾರ್ಯ ಸಾಧ್ಯತೆ ಇದೆ.