ಮಾಜಿ ಸಚಿವ ರಮೇಶ್ ಜಾರಕಿ ಹೋಳಿ ಹಾಗೂ ಸುಧಾಕರ್ ಅವರು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ.
ಈ ಸಂಬಂಧ ಅವರೇ ಹೇಳಿಕೆ ನೀಡಿದ್ದಾರೆ. ಎಸ್‌ಎಂ. ಕೃಷ್ಣ ಭೇಟಿ ವೇಳೆಯೇ ಬಿಜೆಪಿ ನಾಯಕರು ಆಗಮಿಸಿದ್ದಾರೆ. ಹೊರತು ಇನ್ನಾವ ಉದ್ದೇಶವೂ ಇಲ್ಲ ಎಂದು ಅವರೇ ಸ್ಪಷ್ಟ ಪಡಿಸಿದ್ದಾರೆ. ಆದರೆ ರಮೇಶ್ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ಭರವಸೆ ಇದೆ. ಅವರ ಹೇಳಿಕೆ ಮೇಲೆ ನಂಬಿಕೆ ಇದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೋಳಿ ಅವರು ಸರಕಾರ ಪರವಾಗಿಯೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಚಿವ ಸಂಪುಟ ಸಹೋದ್ಯೋಗಿಗಳ ಬದಲಾವಣೆ ಬಗ್ಗೆ ಯಾವುದೆ ಚರ್ಚೆಯಾಗಿಲ್ಲ. ಆದರೆ ರಾಜಕೀಯ ಬೆಳವಣಿಗೆಗೆ ಅನುಗುಣವಾಗಿ ಕೆಲವು ಬದಲಾವಣೆ ಮಾಡಲಾಗುವುದು ಎಂದರು. ಯಾರೂ ಅಸಮಾಧಾನ ಶಾಸಕರಿಲ್ಲ.
ಅವರ ಕ್ಷೇತ್ರದಲ್ಲಿ ಕೆಲಸವಾಗಿಲ್ಲ ಎಂಬ ಬೇಸರವಷ್ಟೆ. ಅಷ್ಟಕ್ಕೆ ಅಸಮಾಧಾನ ಶಾಸಕರು ಎಂದು ಹೇಳುವುದು ತಪ್ಪು ಎಂದರು.