Publish Date: Tue, 14 Mar 2023 (16:24 IST)
Updated Date: Tue, 14 Mar 2023 (16:29 IST)
ಸಚಿವ V. ಸೋಮಣ್ಣ BJP ತೊರೆದು ಕಾಂಗ್ರೆಸ್ ಸೇರುತ್ತಾರೆಂಬ ವಿಚಾರ ಹಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿತ್ತು. ಸೋಮಣ್ಣರವರಿಗೆ ವಿಜಯ ಸಂಕಲ್ಪ ರಥಯಾತ್ರೆಗೆ ಆಹ್ವಾನ ನೀಡಿರಲಿಲ್ಲ.. ಇದರ ಜೊತೆಗೆ ಟಿಕೆಟ್ ವಿಚಾರವಾಗಿ V. ಸೋಮಣ್ಣರವರಿಗೆ ಪಕ್ಷದ ಮೇಲೆ ಅಸಮಾಧಾನವಿತ್ತು ಎನ್ನಲಾಗಿದೆ. ಈ ನಡುವೆಯೇ ಬಿಜೆಪಿಯ ನಾಯಕರು V.ಸೋಮಣ್ಣ ಜೊತೆ ಚರ್ಚೆ ಮಾಡಿ, ಅವರಲ್ಲಿನ ಅಸಮಾಧಾನ ಶಮನ ಮಾಡೋ ಪ್ರಯತ್ನವನ್ನು ಮಾಡಿದ್ದಾರೆ. ಸಭೆಯಲ್ಲಿನ ಮಾತುಕತೆಯ ನಂತರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸೋಮಣ್ಣ, ಕಾಂಗ್ರೆಸ್ ಸೇರ್ಪಡೆ ವದಂತಿಗೆ V.ಸೋಮಣ್ಣ ತೆರೆ ಎಳೆದಿದ್ದಾರೆ. ಸೋಮಣ್ಣ ಪುತ್ರನಿಗೆ ಲೋಕಸಭೆ ಟಿಕೆಟ್ ನೀಡುವ ಭರವಸೆಯನ್ನು BJP ನೀಡಿದೆ. ಡಿಕೆಶಿ ನನ್ನನ್ನು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸಂಪರ್ಕಿಸಿಲ್ಲ ಎಂದು ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.