Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಾನ ಮರ್ಯಾದೆ ಇದ್ರೆ ಆರ್ ಅಶೋಕ್ ರಾಜೀನಾಮೆ ಕೊಟ್ಡು ಹೊರಗೆ ಬರಲಿ ಎಂದು ಕೆಪಿಸಿಸಿ ಆಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ. ಒಕ್ಕಲಿಗ ಹಾಗೂ ಪಂಚಮಸಾಲಿಗೆ ಮೀಸಲಾತಿ ವಿಚಾರವಾಗಿ ಮಾತನಾಡಿ ಸಿಎಂ ಹೇಗೆ ಮಾಡಿದಾರೆ ಅಂದ್ರೆ ತುಪ್ಪನ ಮೊಣಕೈಗೂ ಸವರಿಲ್ಲ. ಮೂಗಿಗೂ ಸವರಿಲ್ಲ.ತಲೆ ಮೇಲೂ ತುಪ್ಪ ಸುರಿದುಬಿಟ್ರು, ಅದು ನಾಲಿಗೆಗೂ ಈಗ ಸಿಕ್ತಿಲ್ಲ, ಏನ್ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ. ಆದ್ದರಿಂದ ಪಂಚಮಸಾಲಿ ಶಾಸಕರು ಸಚಿವರು ರಾಜೀನಾಮೆ ಕೊಡಬೇಕು. ಮಾನ ಮರ್ಯಾದೆ ಇದ್ರೆ ಅಶೋಕ್ ಕೂಡ ರಾಜೀನಾಮೆ ಕೊಟ್ಡು ಹೊರಗೆ ಬರಲಿ.ಒಕ್ಕಲಿಗ ಸ್ವಾಮಿಜಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ.ಅವತ್ತು ಸಭೆಯಲ್ಲಿ ಇದೇ ಅಶೋಕ್ ಭರವಸೆ ಕೊಟ್ಟು ಹೋಗಿದ್ರು.ಈಗ ಹೋಗಿ ಕ್ಯಾಬಿನೆಟ್ ನಲ್ಲಿ ಪಕ್ಕದಲ್ಲಿ ಕೂತಿದ್ದಾರೆ ಎಂದು ಸಚಿವ ಆರ್ ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.