Publish Date: Sun, 02 Apr 2023 (21:14 IST)
Updated Date: Sun, 02 Apr 2023 (20:34 IST)
ಸಿಎಂ ಯಾವಾಗಲೂ ಜನರಿಗೆ ಪೂಲ್ ಮಾಡೋ ಕೆಲಸ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ.ಮಹಿಳೆಯರಿಗೆ ಉಚಿತ ಬಸ್ ಪಾಸ್ ಇನ್ನು ಕೊಡದೇ ಇರೋ ವಿಚಾರವಾಗಿ ಮಾತನಾಡಿದ ಅವರು ಸಿಎಂ ಯಾವಾಗಲೂ ಜನರಿಗೆ ಪೂಲ್ ಮಾಡೋ ಕೆಲಸ ಮಾಡ್ತಿದ್ದಾರೆ.ದುಡಿಯುವ ಮಹಿಳೆಯರಿಗೆ ಪಾಸ್ ಕೊಡ್ತಿನಿ ಅಂದ್ರು.ಸಿಂದಗಿ ಇಲೆಕ್ಷನ್ ಟೈಮಲ್ಲಿ ಕೋಲಿ ಸಮುದಾಯಕ್ಕೆ ಮೀಸಲಾತಿ ಕೊಡ್ತಿನಿ ಅಂದ್ರು,ಆದ್ರೆ ಕೊಟ್ಟಿಲ್ಲಾ. ಅದಕ್ಕೆ ಬಾಬು ರಾವ್ ಚಿಂಚನಸೂರ್ ನಮ್ಮ ಪಾರ್ಟಿಗೆ ಬಂದ್ರು.ಮೀಸಲಾತಿ ವಿಚಾರದಲ್ಲೂ ಹೀಗೆ ಮಾಡಿದ್ದಾರೆ ಎಂದು ಹೇಳಿದರು.ಇನ್ನೂ ಎರಡನೇ ಪಟ್ಟಿ ವಿಚಾರವಾಗಿ ಮಾತನಾಡಿ ಸಿಇಸಿ ಮೀಟಿಂಗ್ ನಾಲ್ಕನೇ ತಾರೀಖಿದೆ.ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಸಹಿ ಹಾಕಬೇಕು. ಆಮೇಲೆ ತೀರ್ಮಾನ ಆಗುತ್ತದೆ ಎಂದರು.