ಅನರ್ಹರು ಮತದಾರರ ಸ್ವಾಭಿಮಾನ ಕೆರಳಿಸಿದ್ದಾರೆ. ಯಾರೂ ಕೂಡ ಇವರಿಗೆ ರಾಜೀನಾಮೆ ಕೊಡಲು ಹೇಳಲಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ರಾಜೀನಾಮೆ ನೀಡಿದ್ದಾರೆ. ಆದರೆ ಇಷ್ಟು ದಿನ ರಾಜಕೀಯದಲ್ಲಿ ಅವರು ಮಾಡಿರುವುದಾರು ಏನು? ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅನರ್ಹರ ವಿರುದ್ಧ ವಾಗ್ದಾಳಿ ನಡೆಸಿದರು.
ಮತದಾರರು ಬಿಜೆಪಿಯವರಿಂದ ನೋಟು ತೆಗೆದುಕೊಂಡು ಅನರ್ಹರ ವಿರುದ್ಧ ಮತ ಹಾಕುತ್ತಾರೆ ಎಂದು ಅನರ್ಹರ ವಿರುದ್ಧ ಕಿಡಿ ಕಾರಿದರು.
ಡಿಸೆಂಬರ್ 9 ರ ನಂತರ ರಾಜ್ಯ ರಾಜಕಾರಣದಲ್ಲಿ ಏನ್ ಬೇಕಾದರೂ ಆಗಬಹುದು. ಈಗಾಗಲೇ ಮಹಾರಾಷ್ಟ್ರ, ಹರಿಯಾಣದಲ್ಲಿ ನೋಡಿದ್ದೇವೆ. ಕರ್ನಾಟಕದ ಚುನಾವಣೆಯಲ್ಲಿ ಕೂಡ ಏನು ಬೇಕಾದರೂ ಬದಲಾವಣೆ ಆಗಬಹುದು ಎಂದರು.