Select Your Language

Notifications

webdunia
webdunia
webdunia
webdunia

ಅಮ್ಮಂದಿರ ದಿನಕ್ಕೆ ತಾಯಿಗೆ ವಿಶೇಷ ವಿಡಿಯೋ ಮೂಲಕ ವಿಶ್ ಮಾಡಿದ ಡಿಕೆ ಶಿವಕುಮಾರ್

DK Shivakumar mother

Krishnaveni K

ಬೆಂಗಳೂರು , ಭಾನುವಾರ, 11 ಮೇ 2025 (10:53 IST)
Photo Credit: X
ಬೆಂಗಳೂರು: ಇಂದು ವಿಶ್ವ ತಾಯಂದಿರ ದಿನವಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ತಾಯಿಗೆ ವಿಶೇಷ ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ.

ತಾಯಂದಿರ ದಿನದ ಅಂಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ತಮ್ಮ ತಾಯಂದಿರಿಗೆ ಶುಭ ಹಾರೈಸುತ್ತಿದ್ದಾರೆ. ಅನೇಕ ಶುಭ ಹಾರೈಕೆಯ ವಿಡಿಯೋ, ಫೋಟೋಗಳು ಹರಿದಾಡುತ್ತಿವೆ. ಇದರ ಮಧ್ಯೆ ಡಿಕೆಶಿ ಪೋಸ್ಟ್ ಗಮನಸೆಳೆಯುವಂತಿದೆ.

ಡಿಕೆ ಶಿವಕುಮಾರ್ ತಮ್ಮ ರಾಜಕೀಯ ಜೀವನದ ಎಷ್ಟೇ ಬ್ಯುಸಿ ಶೆಡ್ಯೂಲ್ ನಲ್ಲೂ ಆಗಾಗ ತಮ್ಮ ತಾಯಿ ಗೌರಮ್ಮನ ಮನೆಗೆ ಭೇಟಿ ನೀಡಿ ಬರುತ್ತಾರೆ. ತಾಯಿಯೆಂದರೆ ಅವರಿಗೆ ಅಷ್ಟು ಅಕ್ಕರೆ. ಇಂದು ವಿಶ್ವ ತಾಯಂದಿರ ದಿನದ ಅಂಗವಾಗಿ ತಮ್ಮ ಅಮ್ಮನ ಜೊತೆಗಿನ ಪ್ರೀತಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಭಾವುಕ ಸಂದೇಶವೊಂದನ್ನೂ ಬರೆದುಕೊಂಡಿದ್ದಾರೆ.

‘ಇಂದಿಗೂ ನಾನು ಅವಳ ಮಡಿಲಲ್ಲಿ ಮಗುವಾಗಿಬಿಡುತ್ತೇನೆ. ಮಾತನಾಡುತ್ತಿದ್ದರೆ ಚಿಂತೆಗಳೆಲ್ಲವನ್ನು ಕಳೆದು ಹಗುರಾಗಿಬಿಡುತ್ತೇನೆ. ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡು ಭಾವುಕನಾಗಿಬಿಡುತ್ತೇನೆ. ನನ್ನ ಶಿಕ್ಷಣಕ್ಕಾಗಿ, ಉತ್ತಮ ಭವಿಷ್ಯಕ್ಕಾಗಿ ಅವಳ ತ್ಯಾಗವನ್ನು ನೆನಪಿಸಿಕೊಳ್ಳುತ್ತೇನೆ. ಶಿವಾಲ್ದಪ್ಪನ ಬೆಟ್ಟದಲ್ಲಿ ನನ್ನ ಹುಟ್ಟಿಗೋಸ್ಕರ ಹರಕೆ ಕಟ್ಟಿಕೊಂಡ ಕತೆ ಕೇಳಿ ಹರ್ಷಪಡುತ್ತೇನೆ. ಇವಳು ನನ್ನ ಪಾಲಿನ ದೇವತೆ, ನನ್ನ ಭಾಗ್ಯದಾತೆ. ಮಮತೆಯ ಸಾಕಾರಮೂರ್ತಿ ನನ್ನವ್ವನಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು. ನಾಡಿನ ಎಲ್ಲಾ ತಾಯಂದಿರಿಗೂ ಪ್ರೀತಿಯ ಶುಭಾಶಯಗಳು’  ಎಂದಿದ್ದಾರೆ.


DK Shivakumar mother, Mothers day, DK Shivakumar news, ಡಿಕೆ ಶಿವಕುಮಾರ್ ತಾಯಿ, ವಿಶ್ವ ತಾಯಂದಿರ ದಿನಾಚರಣೆ, ಡಿಕೆ ಶಿವಕುಮಾರ್ ನ್ಯೂಸ್

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿರುವ ಬಂದರು ಪಾಕಿಸ್ತಾನದಿಂದ ಉಡೀಸ್: ಅಬ್ಬಾ ಪಾಕಿಸ್ತಾನಿಯರ ಬುದ್ಧಿವಂತಿಕೆಯೇ..