Publish Date: Thu, 26 Feb 2026 (10:34 IST)
Updated Date: Thu, 26 Feb 2026 (10:37 IST)
ಬೆಂಗಳೂರು: ಗ್ಯಾರಂಟಿಯಿಂದ ಆರ್ಥಿಕ ಹೊರೆಯಾಗುತ್ತಿದೆ, ಆದರೂ ಕೊಡ್ತಿದ್ದೀವಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಾಗಿ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ. ಬಜೆಟ್ ನ ಬಹುಪಾಲು ಗ್ಯಾರಂಟಿ ಯೋಜನೆ ಪಾಲಾಗುತ್ತಿದೆ. ಇದರ ಬಗ್ಗೆ ಕೆಲವು ಹಿರಿಯ ಶಾಸಕರೇ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ.
ಈ ಹಿಂದೆ ಒಮ್ಮೆ ಡಿಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿ ಹೊರೆಯಾಗ್ತಿದೆ ಎಂದಿದ್ದು ಭಾರೀ ವಿವಾದವಾಗಿತ್ತು. ಬಳಿಕ ಮಲ್ಲಿಕಾರ್ಜುನ ಖರ್ಗೆಯವರೇ ಬಹಿರಂಗವಾಗಿ ಸುದ್ದಿಗೋಷ್ಠಿಯಲ್ಲಿ ಮಾತು ಕೊಟ್ಟ ಮೇಲೆ ಕೊಡಬೇಕು ಎಂದಿದ್ದರು.
ಇದೀಗ ಮತ್ತೆ ಡಿಕೆ ಶಿವಕುಮಾರ್ ಅದೇ ಮಾತನಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆಯಾಗ್ತಿದೆ. ಆದರೂ ಅವು ಜನರಿಗೆ ಆರ್ಥಿಕ ಬಲ ನೀಡಿವೆ. ಹೀಗಾಗಿ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಿಲ್ಲ ಎಂದಿದ್ದಾರೆ. ಅವರ ಹೇಳಿಕೆ ಮತ್ತೆ ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.