ಬೆಂಗಳೂರು: ಐಟಿ ದಾಳಿ ವೇಳೆ ಚೀಟಿ ಹರಿದು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ಗೆ ಸೂಚಿಸಿರುವ ಬಗ್ಗೆ ಅವರೇ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಸಚಿವ ಡಿಕೆಶಿ ನಾನು ಚೀಟಿ ಹರಿದು ಹಾಕಿರುವುದಕ್ಕೆ ಏನಾದರೂ ಪುರಾವೆಯಿದೆಯಾ? ಅಷ್ಟಕ್ಕೂ ಬಿಜೆಪಿ ನಾಯಕರಿಗೆ ಈ ವಿಚಾರ ಹೇಗೆ ತಿಳಿಯಿತು? ಎಂದು ಸಚಿವರು ಪ್ರಶ್ನಿಸಿದ್ದಾರೆ.
‘ಐಟಿ ದಾಳಿ ನಡೆದು 7 ತಿಂಗಳು ಕಳೆದ ಮೇಲೆ ಎಫ್ಐಆರ್ ಹಾಕುವುದರ ಹಿಂದಿನ ಉದ್ದೇಶವೇನು? ನಾನು ಕಾನೂನಾತ್ಮಕವಾಗಿಯೇ ವ್ಯವಹಾರ ಮಾಡುತ್ತೇನೆ. ಈ ವಿಚಾರವನ್ನು ಕಾನೂನು ಮೂಲಕವೇ ಹೋರಾಡುತ್ತೇನೆ. ಯಾವ ಜೈಲಿಗಾದರೂ ಕಳುಹಿಸಲಿ. ನಾನು ಯಾರಿಗೂ ಹೆದರುವವನಲ್ಲ’ ಎಂದು ಡಿಕೆಶಿ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ