Publish Date: Wed, 29 Apr 2026 (16:12 IST)
Updated Date: Wed, 29 Apr 2026 (16:14 IST)
ಬೆಂಗಳೂರು: ಮೇ 15 ರೊಳಗೆ ಹೈಕಮಾಂಡ್ ಸಿಹಿ ಸುದ್ದಿ ನೀಡುತ್ತದೆ ಎಂದು ನಾಯಕತ್ವ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನ ಕೆಲವು ಶಾಸಕರ ಹೇಳಿಕೆ ಬಗ್ಗೆ ಡಿಕೆ ಶಿವಕುಮಾರ್ ಗೆ ಕೇಳಿದಾಗ ಏನು ಮಾಡಿದ್ರು ಗೊತ್ತಾ?
ಇಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಡಿಕೆ ಶಿವಕುಮಾರ್ ಗೆ ಪತ್ರಕರ್ತರು ಮೇ 15 ರೊಳಗೆ ಸಿಹಿ ಸುದ್ದಿ ಸಿಗುತ್ತದೆ ಎಂದು ಕಾಂಗ್ರೆಸ್ ನ ಕೆಲವು ಶಾಸಕರು ಹೇಳಿದ್ದಾರೆ. ಇಕ್ಬಾಲ್ ಹುಸೇನ್ ಅವರು ಹೇಳಿದ್ದಾರೆ ಸಾರ್. ಇದು ನಿಜಾನಾ ಸಾರ್ ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯಿಸದ ಡಿಕೆ ಶಿವಕುಮಾರ್ ಕೇಳಿಯೂ ಕೇಳಿಸದವರಂತೆ ಮುಂದೆ ನಡೆದಿದ್ದಾರೆ. ಆದರೆ ಡಿಕೆಶಿ ಬೆಂಬಲಿಗ ಶಾಸಕರು ಮಾತ್ರ ಹೈಕಮಾಂಡ್ ತೀರ್ಮಾನವನ್ನು ಎದಿರು ನೋಡುತ್ತಿದ್ದಾರೆ. ಮೇ ಅಂತ್ಯದೊಳಗೆ ನಿಮಗೆ ನ್ಯಾಯ ಸಿಗುತ್ತದೆ ಎಂದು ಹೈಕಮಾಂಡ್ ಹೇಳಿರುವುದಾಗಿ ಶಾಸಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ.
ಸದ್ಯಕ್ಕೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಳಿಕ ನಾಯಕತ್ವ ಬದಲಾವಣೆ ವಿಚಾರವಾಗಿ ಒಂದು ತೀರ್ಮಾನವಾಗುವುದು ಖಚಿತ ಎನ್ನಲಾಗುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ